ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜದ ವಿವಾದದ ಪತಿಭಟನೆಯ ಮೆರವಣಿಗೆ ಸಮಯದಲ್ಲಿ ಈ ಮುಖಂಡರುಗಳು ಪ್ರತಿಭಟನಾಕಾರರನ್ನು ಪ್ರಚೋದನೆಗೋಳಿಸಿ ಮಂಡ್ಯ ನಗರದ ಬಿ.ಎಂ. ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿನಿಲಯ ಕಟ್ಟಡದ ಮೇಲೆ ಕಲ್ಲು ತೂರಾಟ ಮಾಡಿ ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸ ಗೊಳಿಸಿರುತ್ತಾರೆ. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕೃತ್ಯವನ್ನು ಎಸಗಿದ ಎಲ್ಲರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಮತ್ತು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆಯ ಕ್ರಮ ಕೈಗೊಳಬೇಕು ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಸರ್ಕಾರವನ್ನು ಒತ್ತಾಯ ಮಾಡಲಾಯಿತು.
ಇಂದು ಕುರುಬರ ಸಂಘದಿಂದ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ ಕುರುಬ ಸಮಾಜದ ಪದಾಧಿಕಾರಿಗಳು, 2024ರಂದು ಚಿತ್ರದುರ್ಗದಲ್ಲಿ ನಡೆದ ನಮ್ಮ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಶೋಷಿತರ ಜಾಗೃತಿ ಸಮಾವೇಶವನ್ನು ಯಶಸ್ವಿಯಾಗಿ ಮಾಡಿದ ಪ್ರತಿಕಾರ ಮತ್ತು ಅಸೂಯೆಗಾಗಿ ಕುರುಬರ ಜನಾಂಗದವರು ಕೂಡ ಶೋಷಿತ ಸಮುದಾಯಗಳಲ್ಲಿ ಬರುವ ಕಾರಣದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಶೋಷಿತರ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿಯವರ ಭಾಷಣದ ತಿರುಳನ್ನು ಸಹಿಸಿಕೊಳ್ಳಲಾಗದೇ ಶೋಷಿತರ ಮೇಲೆ ಭಯ ಮತ್ತು ದಬ್ಬಾಳಿಕೆಯ ವಾತವರಣವನ್ನು ಸೃಷ್ಟಿಸಲು ಹೊರಟಿದ್ದಾರೆ. ಆದರೆ ಈ ರಾಜ್ಯದಲ್ಲಿ ಶೋಷಿತ ಸಮುದಾಯದವರು ಭಯದ ಮತ್ತು ದಬ್ಬಾಳಿಕೆಯ ವಾತವರಣದಿಂದ ಹೊರಬಂದು ಇಂತಹ ನೀಚಕೃತ್ಯಗಳ ವಿರುದ್ಧ ಹೋರಾಟ ಮಾಡುವಷ್ಟು ಶಕ್ತರಾಗಿದ್ದಾರೆ ಎಂದು ಅಧ್ಯಕ್ಷ ಶ್ರೀರಾಮ್ ತಿಳಿಸಿದ್ದಾರೆ
ಕುಮಾರಸ್ವಾಮಿಯವರಿಗೆ ಈ ಸಮಾವೇಶದ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವುಗಳು ಈ ಸಮಾವೇಶಕ್ಕೆ ಮುಖ್ಯಮಂತ್ರಿಗಳಿಂದ ಕಿಂಚಿತ್ತು ಸಹಕಾರವನ್ನು ಕೇಳಿರುವುದಿಲ್ಲ. ಇಂತಹ ಕೃತ್ಯಗಳು ರಾಜ್ಯದಲ್ಲಿ ಮರುಕಳಿಸಿದರೆ ರಾಜ್ಯಾದ್ಯಂತ್ಯ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷಗಳ ವಿರುದ್ಧವಾಗಿ ದಂಗೆ ಎಳಬೇಕಾಗುತ್ತದೆ. ಮತ್ತು ನಿಮ್ಮ ಪಕ್ಷದಲ್ಲಿರುವ ಶೋಷಿತ ಸಮುದಾಯಗಳ ಮುಖಂಡರುಗಳು ಆ ಪಕ್ಷಗಳನ್ನು ತ್ಯೆಜಿಸಿ ಹೊರಬರಬೇಕು ಇಲ್ಲವಾದಲ್ಲಿ ಈ ಶೋಷಿತ ಸಮುದಾಯಗಳ ಪ್ರತಿಕಾರವನ್ನು ಎದರಿಸಬೇಕಾಗುತ್ತದೆ. ಬಿ.ಜೆ.ಪಿ ಪಕ್ಷದ ಮುಖಂಡ ಸಿ.ಟಿ. ರವಿ ಎಂಬ ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡ ರೀತಿಯಲ್ಲಿ ವರ್ತಿಸುತ್ತಿದ್ದು, ಈಗಾಗಲೇ ಇದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಶೋಷಿತ ಸಮುದಾಯಗಳು ಕೂಡ ಬಹುಸಂಖ್ಯಾತ ಹಿಂದುಗಳಾಗಿದ್ದು, ಇಂತಹ ಪ್ರಚೋದನಕಾರಿ ಕೃತ್ಯಗಳಿಂದ ಯುವಕರುಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. ಸಮಾಜದಲ್ಲಿ ಸಮಾರಸ್ಯದಿಂದ ಕೂಡಿ ಭಾಳ್ವೆಯನ್ನು ನಡೆಸುತ್ತಿರುವ ಎಲ್ಲಾ ಸಮುದಾಯಗಳನ್ನು ಹೊಡೆದು ಆಳುವ ನೀತಿಯನ್ನು ಈ ಕೂಡಲೇ ನಿಲ್ಲಿಸದಿದ್ದರೇ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷಗಳು ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದರಿಸಬೇಕಾಗುತ್ತದೆ ಮತ್ತು ತಕ್ಕ ರೀತಿ ಪಾಠವನ್ನು ಎರಡು ಪಕ್ಷಗಳಿಗೆ ಕಲಿಸಬೇಕಾಗುತ್ತದೆ ಎಂದು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಜೊತೆಗೆ ಮಲ್ಲಿಕಾರ್ಜುನ್ ಮಾಜಿ ಉಪಾಧ್ಯಕ್ಷರು ನಗರಸಭೆ ಚಿತ್ರದುರ್ಗ, ಜಿಲ್ಲಾ ಕುರುಬರ ಸಂಘದ ಸಂಘದ ಖಜಾಂಚಿ ಜಿ.ಟಿ. ಮೃತ್ಯುಂಜಯ, ಎಮ್. ವಿ. ಮಾಳೇಶ್, ಎಮ್.ನಿರ್ದೇಶಕರಾದ ಡಿ.ಉಮೇಶ್ ಜಯಶಂಕರ್,ಚೋಳಘಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಗಳಾದ ಮತ್ತು ಸಂಘದ ನಿರ್ದೇಶಕರುಗಳಾದ ಹೆಚ್. ಸುರೇಶ್, ಸುರೇಶ್ ಉಗ್ರಾಣ, ಕೆ.ಪಿ.ಶಿವರಾಜ್ ಸಜ್ಜನಕೆರೆ ರಾಜು ದೇವರಾಜ್,ಇತರರು ಭಾಗವಹಿಸಿದ್ದರು.