ಶಾಶ್ವತ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಅವರ ಅವಧಿಯನ್ನು ರಾಜ್ಯ ಸರ್ಕಾರವು ಫೆಬ್ರವರಿ 29 ವರೆಗೆ ಅಂದರೆ ಒಂದು ತಿಂಗಳ ಕಾಲ ಅವಕಾಶವನ್ನು ನೀಡಿದ್ದು ಈ ಮೂಲಕ ಸಿದ್ದರಾಮಯ್ಯನವರ ಸರ್ಕಾರವು ಜಾತಿಗಣತಿ ವರದಿ ಸ್ವೀಕರಿಸುವುದು ಖಚಿತವಾಗಿದ್ದು ಎಂದು ಮೂಲಗಳ ಪ್ರಕಾರ ಇನ್ನು 15 ದಿನಗಳಲ್ಲಿ ಜಾತಿ ಗಣತಿಯ ವರದಿಯು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ ಇನ್ನು ಈ ಬಗ್ಗೆ ಮಾತನಾಡಿರುವ ನಮ್ಮ ಹಿಂದುಳಿದ ವರ್ಗಗಳ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಅವಧಿಯನ್ನು ನಾವು ಇವತ್ತು ಸಹಿ ಮಾಡಿ ಕಳುಹಿಸಿದ್ದೇವೆ ಅವರು ನಮ್ಮ ಬಳಿ ಸಮಯವನ್ನು ಕೇಳಿದ್ದಾರೆ ಹಾಗಾಗಿ ನಾವು ಅಧ್ಯಕ್ಷರ ಮಾತಿಗೆ ಒಪ್ಪಿ ಸಮಯ ಕೊಡಬೇಕು ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.