ತಿರುಪತಿ ತಿಮ್ಮಪ್ಪನಿಗೆ ಬರುವ ಕಾಣಿಕೆಯ ಹಣದಿಂದ ಭಕ್ತರಿಗೆ 5 ಗ್ರಾಂ ಇಲ್ಲವೇ 10 ಗ್ರಾಂ ಬಂಗಾರದ ಕರಿಮಣಿ ಮಂಗಳಸೂತ್ರವನ್ನು ನವ ದಂಪತಿಗಳಿಗೆ ಕೊಡಬೇಕೆಂದು ಇಲ್ಲಿನ ಟಿಟಿಡಿ ಕಮಿಟಿಯ ಮಂಡಳಿಯ ಸಭೆಯಲ್ಲಿ ಅಧ್ಯಕ್ಷರು 2024ರ ಹೊಸ ಸೂಚನೆಯನ್ನು ಹೊರಡಿಸಿದ್ದಾರೆ ಜಲ್ಲಿ ಕಲ್ಲು ರಸ್ತೆಗಳ ನಿರ್ಮಾಣ ವಿವಿಧ ಇಲಾಖೆಗಳ ವೇತನ ಭತ್ತೆ ಹೆಚ್ಚಳ ಮತ್ತು 60 ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು, ಸ್ವಿಮ್ಸ್ ಆಸ್ಪತ್ರೆಯ ಹಾಸಿಗೆಯನ್ನು 300 ರಿಂದ 1000 ವರೆಗೆ ಹೆಚ್ಚಿಸುವುದು ಅನ್ನಮಯ್ಯ ಭವನದ ಜೊತೆಗೆ ಕುಟಿರೆಗಳ ಅಭಿವೃದ್ಧಿಗೆ ಅಪಾರ ಹಣ ಮೀಸಲಿಟ್ಟಿದೆ ಶೀಘ್ರವೇ ಬೆಟ್ಟ ಪ್ರದರ್ಶನ ಮಾಡಲು ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಮಂಡಳಿ ವ್ಯವಸ್ಥಾಪಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ