ವಿದೇಶಿ ವಿನಿಮಯ ಮಾರುಕಟ್ಟೆಯು ಒಂದು ಕರೆನ್ಸಿಯನ್ನು ಇನ್ನೊಂದಕ್ಕೆ ವಿನಿಮಯ ಮಾಡಿಕೊಳ್ಳುವ ಮೂಲಕ ಕಾರ್ಯ ನಿರ್ವಹಿಸುತ್ತದೆ ಮಾರುಕಟ್ಟೆ ಭಾಗಯಿಸುವವರ ಅಂತರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಗೆ ಅನುಕೂಲಕರವಾಗುವಂತೆ ಕರೆನ್ಸಿಗಳನ್ನು ಖರೀದಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ ಮತ್ತು ಕರೆನ್ಸಿ ಬೆಲೆಯ ಚಾಲನೆಯನ್ನು ಊಹಿಸುತ್ತಾರೆ ವಿನಿಮಯ ದರ ಒಂದು ಕರೆನ್ಸಿಯ ಮೌಲ್ಯವು ಇನ್ನೊಂದಕ್ಕೆ ಹೋಲಿಸಿದರೆ ಮಾರುಕಟ್ಟೆಯಲ್ಲಿನ ಪೂರೈಕೆ ಮತ್ತು ಬೇಡಿಕೆಯ ಶಕ್ತಿಗಳಿಂದ ನಿರ್ಧರಿಸಲ್ಪಡುತ್ತದೆ
ಕರೆನ್ಸಿ ಮೌಲ್ಯಗಳು ಆರ್ಥಿಕ ಸೂಚಕಗಳು ಭೌಗೋಳಿಕ ರಾಜಕೀಯ ಘಟನೆಗಳು ಮತ್ತು ಕೇಂದ್ರ ಬ್ಯಾಂಕ್ ನೀತಿಗಳು ಸೇರಿದಂತೆ ವಿವಿಧ ಅಂಶಗಳಿಂದ ಪ್ರಭಾವಿತವಾಗಿವೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ವಹಿವಾಟು ಕೌಂಟರ್ ಮೂಲಕ ಅಥವಾ ಎಲೆಕ್ಟ್ರಾನಿಕ್ ಟ್ರೇಡಿಂಗ್ ಫ್ಲಾಟ್ ಫಾರಂ ಗಳ ಮೂಲಕ ನಡೆಯಬಹುದು ಮತ್ತು ಮಾರುಕಟ್ಟೆಯ ದಿನದ 24 ಗಂಟೆಗಳು ವಾರಗಳಲ್ಲಿ ಐದು ದಿನಗಳು ಪ್ರಪಂಚದಾದ್ಯಂತ ಪ್ರಮುಖ ಹಣಕಾಸು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿ ಮೂರು ಮುಖ್ಯ ವಿಧಗಳಾಗಿವೆ ಅವುಗಳೆಂದರೆ ಸ್ಪಾಟ್ ವಿದೇಶಿ ವಿನಿಮಯ ಮಾರುಕಟ್ಟೆ, ಫಾರ್ವರ್ಡ್ ಫಾರೆಕ್ಸ್ ಮಾರುಕಟ್ಟೆ, ಫ್ಯೂಚರ್ಸ್ ವಿದೇಶಿ ವಿನಿಮಯ ಮಾರುಕಟ್ಟೆ ಈ ರೀತಿಯಾಗಿ ವಿದೇಶಿ ಮಾರುಕಟ್ಟೆಯು ತಮ್ಮ ಕಾರ್ಯವನ್ನು ನಿರ್ವಹಿಸುತ್ತದೆ