2024 ರ ಲೋಕಸಭೆ ಚುನಾವಣೆಯು ಹತ್ತಿರವಾದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ ಇದರ ಬೆನ್ನ ಹಿಂದೆ ನಮ್ಮ ಬೆಣ್ಣೆ ನಗರಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2024 ರ ಚುನಾವಣೆಯು ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರವಾಗಿದ್ದು ಇದರಲ್ಲಿ ದಿನೇ ದಿನೇ ಆಕಾಂಕ್ಷೆಗಳ ಸಂಖ್ಯೆಯು ಹೆಚ್ಚಾಗಿದ್ದು ಅದರ ಜೊತೆಗೆ ಸಮುದಾಯಗಳಿಂದಲೂ ಬೇಡಿಕೆ ಬರುತ್ತಿದೆ ಇದೀಗ ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ ಸೇರಿದ ಶ್ರೀ ವಚನಾನಂದ ಸ್ವಾಮೀಜಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಬಿಜೆಪಿ ಎರಡು ಪಕ್ಷಗಳಲ್ಲಿ ಇವರ ಹೆಸರು ಬಹುಮುಖ್ಯವಾಗಿ ಕೇಳಿ ಬಂದಿದ್ದು ಹಾಗೂ ಬೆಣ್ಣೆ ನಗರಿ ಕಾರ್ಯಕರ್ತರ ಹೆಚ್ಚಿನ ಬೇಡಿಕೆಯಾಗಿದ್ದು ರಾಜ್ಯಕ್ಕೆ ಹೋಲಿಸಿದರೆ ಸುಮಾರು 80 ಲಕ್ಷಕ್ಕೂ ಹೆಚ್ಚು ಲಿಂಗಾಯತ ಸಮುದಾಯದವರು ಇದ್ದಾರೆ. ಅದರಲ್ಲಿಯೂ ಕಳೆದ ಮೂರು ವರ್ಷಗಳಿಂದಲೂ ನಮ್ಮ ಸಮುದಾಯಕ್ಕೆ ಹೆಚ್ಚಿನ ಮಾನ್ಯತೆ ರಾಜಕೀಯದಲ್ಲಿ ಸಿಗದೇ ಇರುವುದರಿಂದ ನಮ್ಮ ಜನಾಂಗಕ್ಕೆ ಈ ಬಾರಿಯಾದರೂ ಲೋಕಸಭೆ ಚುನಾವಣೆಯಲ್ಲಿ ನಮ್ಮ ವಚನಾನಂದ ಸ್ವಾಮೀಜಿಗೆ ಟಿಕೆಟ್ ಕೊಡುವಂತೆ ಆಗ್ರಹಿಸಿದ್ದಾರೆ