ಚಳ್ಳಕೆರೆ ತಾಲೂಕಿನ ಶಾಸಕರಾದ ಟಿ ರಘುಮೂರ್ತಿ ಯವರು ತುರುವನೂರು ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ಶಕ್ತಿ, ಭಾಗ್ಯ ಜ್ಯೋತಿ, ಅನ್ನ ಭಾಗ್ಯ, ಗೃಹಲಕ್ಷ್ಮಿ ಮತ್ತು ಯುವ ನಿಧಿ ಎಂಬ ಗ್ಯಾರಂಟಿಗಳನ್ನು ಚುನಾವಣಾ ಮುಂಚಿತವಾಗಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿಕೊಂಡಿತ್ತು ಹಾಗೆ ತಮ್ಮ ಕೆಲಸವನ್ನು ಸಹ ಜಾರಿಗೆ ತರುವುದರ ಮೂಲಕ ಜನರಿಗೆ ಸೌಲಭ್ಯಗಳನ್ನು ತಲುಪಿಸಿದೆ ಅದರ ಅನುಸಾರವಾಗಿ ಜಾನುವಾರುಗಳನ್ನು ರಕ್ಷಿಸಲು ಪ್ರತಿಯೊಂದು ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭಿಸಬೇಕು.
ಗೋವುಗಳು ಭಾರತದ ಪರಂಪರೆ ಮತ್ತು ಸಮಾಜಕ್ಕೆ ಮಹತ್ವದ್ದಾಗಿದೆ ಹಿಂದಿನ ದಿನಗಳಲ್ಲಿ ಪ್ರತಿಯೊಂದು ಮನೆಗಳಲ್ಲಿ ದನದ ಕೊಟ್ಟಿಗೆ ಇರುತ್ತಿತ್ತು ಜನರು ತಮ್ಮ ಮನೆಯಲ್ಲಿ ಹಸುಗಳನ್ನು ಸಾಕುವ ಸಂಪ್ರದಾಯವನ್ನು ಕಳೆದುಕೊಂಡಿದ್ದಾರೆ ರೈತರು ಆರ್ಥಿಕ ಸಂಕಷ್ಟವಾದ ಪರಿಣಾಮವಾಗಿ ಜಾನುವಾರುಗಳನ್ನು ತ್ಯಜಿಸುವುದು ಮತ್ತು ಕಾನೂನು ಬಹಿರಂಗವಾಗಿ ಒದೆ ಮಾಡುವುದರಿಂದ ದೇಶ ಹಸಿವಿನ ತಳಿಗಳು ನಷ್ಟವಾಗುತ್ತಿದೆ ಇದರ ನೆಟ್ಟಿನಿಂದ ನಾವು ಇಂದು ತುರುವನೂರು ಗ್ರಾಮದಲ್ಲಿ ಗೋಶಾಲೆಯನ್ನು ಆರಂಭಿಸಿದ್ದು ಅವುಗಳನ್ನು ಉಳಿಯುವಂತೆ ಮಾಡಬೇಕು. ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ತಾಸಿಲ್ದಾರ್ ಡಾ : ನಾಗವೇಣಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುಧಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಮಹೇಶ್ ಹಾಗೂ ಪಕ್ಷದ ಮುಖಂಡರು ಮತ್ತೀತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.