ಕಲ್ಬುರ್ಗಿ ಜಿಲ್ಲೆಯಲ್ಲಿ ಮದುವೆ ಬಳಿಕ ಸೆಲ್ಫಿ ಕ್ಲಿಕ್ಕಿಸಿಕೊಂಡು ನಾಳೆಗೆ ಶರಣಾದ ಯಾಡ್ರಾಮಿ ತಾಲೂಕಿನಲ್ಲಿ 25 ವರ್ಷದೊಳಗಿನ ಯುವ ಜೋಡಿ. ಈ ಪ್ರಕರಣವು ಯಾಡ್ರಾಮಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವರಸೆಯಲ್ಲಿ ಅಣ್ಣ-ತಂಗಿ ಆಗಿದ್ದ ಕಾರಣಕ್ಕೆ ಮನೆಯ ಹಿರಿಯರು ಶಶಿಕಲಾ ಮತ್ತು ಗೊಲ್ಲಾಳಪ್ಪ ಮದುವೆಗೆ ಒಪ್ಪಿಗೆ ನೀಡಲಿಲ್ಲ. ಇದಲ್ಲದೆ ಮನೆಯ ಹಿರಿಯರು ಶಶಿಕಲಾಗೆ ಸಿಂದಗಿ ತಾಲೂಕಿನ ಗ್ರಾಮವೊಂದರ ಯುವಕನೊಂದಿಗೆ ಇತ್ತೀಚಿಗೆ ನಿಶ್ಚಿತಾರ್ಥ ನೆರವೇರಿಸಿದ್ದರು ಮುಂದಿನ ತಿಂಗಳು ಸಿಂಧಗಿಯ ಯುವಕನ ಜೊತೆಗೆ ಶಶಿಕಲಾ ಮದುವೆ ಮಾಡುವ ನಿರ್ಧಾರ ಕೈಗೊಂಡಿದ್ದರು. ಈ ಮಧ್ಯ ಪರಸ್ಪರ ಒಬ್ಬರನ್ನೊಬ್ಬರು ಅಗಲಿ ಇರಲಾರದ ಕಾರಣಕ್ಕೆ ಗೊಲ್ಲಾಳಪ್ಪ ನೆನ್ನೆ ರಾತ್ರಿ ಶಶಿಕಲಾಳನ್ನು ತನ್ನೊಂದಿಗೆ ಕರೆದೊಯ್ದಿದ್ದ. ಗ್ರಾಮದ ವರವಲಯದ ದೇವಸ್ಥಾನಕ್ಕೆ ಕರೆದೊಯ್ದು ಅಲ್ಲಿ ಅವಳಿಗೆ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದಾರು. ಆಗ ಅದೇ ದೇವಸ್ಥಾನದ ಸಮೀಪದಲ್ಲಿದ್ದ ಮರವೊಂದಕ್ಕೆ ಅವರು ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಈ ಸಾವಿಗೂ ಮುನ್ನವೇ ಅವರು ತಮ್ಮ ಮೊಬೈಲಿನಿಂದ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಸಾವಿಗೆ ಶರಣಾಗಿದ್ದಾರೆಂದು ಮೂಲಗಳು ತಿಳಿಸುವೆ.