ಚಾಮರಾಜನಗರದ ಹೆಗ್ಗೊಠಾರ ಗ್ರಾಮದಲ್ಲಿ ನಾನು ಹುಟ್ಟಿದ್ದು, ಬಾಲ್ಯ ಕಳೆಯಲು ಇಲ್ಲಿ ಬರುತ್ತಿದ್ದೆ. ಇಲ್ಲಿಗೆ ಬಂದರೆ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಗೆಲುವು ನನ್ನ ಕುಟುಂಬ ಹಾಗೂ ಅಭಿಮಾನಿಗಳಿಂದ ಸಾಧ್ಯವಾಗಿದ್ದು. ಹುಟ್ಟೂರಿನಲ್ಲಿ ಬೆಳೆದು ಬಂದ ದಾರಿ ಎಂದಿಗೂ ಮರೆಯಬಾರದು. ಬಿಗ್ ಬಾಸ್ ಗೆದ್ದ ನಂತರ ಒಳ್ಳೆಯ ಕೊಡುಗೆಗಳು ಬರುತ್ತವೆ ಮುಂದೆ ದೊಡ್ಡ ಹೆಜ್ಜೆ ಇಡುವ ಯೋಚನೆಯಿದೆ ಎಂದರು. ಶ್ರೀ ಸಿದ್ದ ಮಲ್ಲೇಶ್ವರ ವಿರಕ್ತ ಮಠಕ್ಕೆ ತೆರಳಿ, ಸಿದ್ದ ಬಸವರಾಜ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು. ಇದೆ ವೇಳೆ ಸಂಘ ಸಂಸ್ಥೆ ಹಾಗೂ ಅಭಿಮಾನಿಗಳು ಕಾರ್ತಿಕ್ ಮಹೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಕಾರ್ತಿಕ್ ಜೊತೆ ಸೆಲ್ಫಿ ತೆಗೆದುಕೊಂಡ ಯುವಕ – ಯುವತಿಯರು ಮುಗಿಬಿದ್ದರು.