ಹಿರಿಯರು : ಸರ್ಕಾರಿ ನೌಕರರಿಗೆ ತುಂಬಾ ತೊಂದರೆಯಾಗುತ್ತಿದೆ ಈ ಎನ್ ಪಿ ಎಸ್ ಹಾಗೂ ಒ ಪಿ ಎಫ್ ಕಾಯ್ದೆ ಜಾರಿಗೆ ಬಂದಿದ್ದು ವಿವಿಧ ಬೇಡಿಕೆಗಳನ್ನು ಸಮರ್ಥಿಸುವಂತೆ ತಾಲೂಕು ನೌಕರರ ಸಂಘವು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಈ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರಿಗೆ ಮನವಿ ಸಲ್ಲಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದೆ. ಶೀಘ್ರವೇ ಈ ಯೋಜನೆ ಕೈ ಬಿಟ್ಟು ಓ ಪಿ ಎಫ್ ಕಾಯಿದೆ ಜಾರಿಗೆ ಬರಬೇಕು. ಎಂದು ಒತ್ತಾಯ ಮಾಡಲಾಗಿದೆ.
2006ರ ಏಪ್ರಿಲ್ 1 ರಂದು ಹೊಸ ಯೋಜನೆ ಜಾರಿಯಲ್ಲಿದೆ. 2.98 ಲಕ್ಷ ನೌಕರರು ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಪಿಂಚಣಿ ಮೊತ್ತವನ್ನು ಎನ್ ಎಸ್ ಡಿ ಎಲ್ ನಲ್ಲಿ ಠೇವಣಿ ಇಡಲಾಗಿದೆ. ಈ ಮೊತ್ತವನ್ನು ಬಳಸಿ ಇವರು ನಿವೃತ್ತಿಯಾಗುವ ವೇಳೆಗೆ ಲಭ್ಯವಾಗುವಂತೆ ಜಿ.ಪಿ.ಎಫ್.ನಲ್ಲಿ ಇಡಬಹುದು.
ಎನ್.ಪಿ.ಎಸ್ ರದ್ದು ಮಾಡುವುದರಿಂದ ಯೋಜನೆಯಲ್ಲಿ ಒಟ್ಟು 19000 ಕೋಟಿ ಹಣ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ದೊರೆಯಲಿದೆ. ನೌಕರರ ಪಾಲಿನ 9000 ಕೋಟಿ ರೂಪಾಯಿ ಜಿ.ಪಿ.ಎಫ್.ಗೆ ಪರಿವರ್ತನೆ ಮಾಡಿಕೊಳ್ಳಬಹುದು. ಹಾಗೂ ಸರ್ಕಾರದ 10 ಸಾವಿರ ಕೋಟಿ ರೂಪಾಯಿ ಸರ್ಕಾರದ ಪಾಲನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದು.
7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ ಹಾಗೂ ಎನ್.ಪಿ.ಎಸ್.ಬದಲಿಗೆ ಓ.ಪಿ.ಎಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕು ನೌಕರರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.