ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಿಶೇಷವಾಗಿ ಮಲೆನಾಡು ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗಿವೆ ಈ ಸೋಂಕು ಹರಡುವಿಕೆ ತಡೆಯುವ ಲಸಿಕೆ ಇಲ್ಲ. ಮುನ್ನೆಚ್ಚರಿಕೆಗೆ ಹೊರತು ಅನ್ಯ ಮಾರ್ಗವೇ ಇಲ್ಲ ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮಂಗನ ಕಾಯಿಲೆ ಗುಣ ಲಕ್ಷಣದ ವಿಚಾರ ಹೇಳುವುದಾದರೆ ಈ ಸೋಂಕು ತಗಲಿದ ಮೂರರಿಂದ ಐದು ದಿನಗಳ ಕಾಲ ತೀವ್ರ ಜ್ವರ, ತೀವ್ರ ಮೈಕೈ ನೋವು, ತಲೆನೋವು, ಕಣ್ಣು ಕೆಂಪಾಗುವುದು ನೆಗಡಿ ಮತ್ತು ಕೆಮ್ಮು ಕಾಣಿಸಿಕೊಳ್ಳುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗನ ಕಾಯಿಲೆ ಎಂದು ಕರೆಯಲ್ಪಡುವ ಕ್ಯಾಸನೂರು ಅರಣ್ಯ ಇಲಾಖೆ (ಕೆ.ಎಫ್.ಡಿ) ಉತ್ತರ ಕನ್ನಡ, ಚಿಕ್ಕಮಂಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಸಾರ್ವಜನಿಕರ ಪಾಲಿಗೆ ಚಿಂತೆಯ ವಿಚಾರವಾಗಿದೆ. ಚಿಕ್ಕಮಂಗಳೂರಿನಲ್ಲಿ ಮಂಗನ ಕಾಯಿಲೆ ಬಂದ ಕಾರಣ ಒಂದು ಸಾವು ಸಂಭವಿಸಿದೆ. ಕಳೆದ ಹತ್ತು ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 21 ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸುವೆ.