ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರು, ಒಂದು ಕಾರ್ಯಕರ್ತರು ಹಾಗೂ ವಕೀಲ ದಿಲೀಪ್ ಕುಮಾರ್ ಅವರು ಖಾಸಗಿ ದೂರು ಸಲ್ಲಿಸಿದರು. 2022 ನವೆಂಬರ್ 6ರಂದು ಬೆಳಗಾವಿಯ ಖಾಸಗಿ ಕಾರ್ಯ ಕ್ರಮವೊಂದರಲ್ಲಿ ಹಿಂದೂ ಎಂಬ ಪದ ಅಶ್ಲೀಲ, ಕೊಳಕು, ಅಸಭ್ಯ ಎಂಬ ಅರ್ಥವಿದೆ ಎಂದು ಹೇಳಿದರು. ಇದರ ಮೂಲ ಭಾರತದಲ್ಲ ಹಿಂದೂ ಎಂಬ ಪದ ಪರ್ಶಿಯನ್ ಭಾಷೆಯಿಂದ ಬಂದಿದೆ. ಎಲ್ಲಿಂದ ಹುಟ್ಟಿತು ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ಥಾನ್ ಪ್ರದೇಶಗಳಿಂದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಇದನ್ನು ಹೇಗೆ ಒಪ್ಪುತ್ತೀರಿ? ಇದನ್ನು ಚರ್ಚೆ ಮಾಡಬೇಕು ಎಂದಿದ್ದರು.
ಈ ಹೇಳಿಕೆ ನಂತರ ಸತೀಶ್ ಜಾರಕಿಹೊಳಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕೋಪಯೋಗಿ ಸಚಿವ ಆಗಿದ್ದಾರೆ ಆದ್ದರಿಂದ ವಕೀಲ ದಿಲೀಪ್ ಕುಮಾರ್ ಎಂಬುವವರು ನೀಡಿದ ದೂರಿನ ಪ್ರಕರಣದ ಅರ್ಜಿ ವಿಚಾರಣೆ ಕೈಗೊಂಡ ಜನಪ್ರತಿನಿಧಿಗಳ ನ್ಯಾಯಾಲಯ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಆದೇಶಿಸಿದೆ.