ಚಿಕ್ಕಮಗಳೂರು 5,000 ರೂಪಾಯಿ ಸಾಲ ಪಡೆದು ವಾಪಸ್ ಕೊಟ್ಟಿಲ್ಲ ಎಂದು ಯುವಕನೊಬ್ಬನಿಗೆ ಯುವಕರ ತಂಡವು ಮಧ್ಯಪಾನ ಮಾಡುತ್ತಾ ಮನ ಬಂದಂತೆ ಥಳಿಸಿದ ಘಟನೆ ಕೊಪ್ಪ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ನಡೆದಿದೆ. ಸತೀಶ್ ಎಂಬತಾ ಐದು ಸಾವಿರ ರೂಪಾಯಿ ಸಾಲ ಪಡೆದಿದ್ದನು ಈ ಹಣವನ್ನು ವಾಪಸ್ ನೀಡಿದ ಹಿನ್ನಲೆಯಲ್ಲಿ ಕೋಪಗೊಂಡ ಸಾಲ ನೀಡಿದ ಯುವಕ ತನ್ನ ಸಹಚರರೊಂದಿಗೆ ಸೇರಿಕೊಂಡು ಈ ಕೃತ್ಯ ನಡೆಸಿದ್ದಾನೆ
ಸತೀಶನ ಕೈ ಕಾಲು ಕಟ್ಟಿ ಹಾಕಿ ಮರಕ್ಕೆ ಕಟ್ಟಿ ತಿಳಿಸಿದ್ದಾರೆ, ಇದರ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ ಸದ್ಯ ಹಲ್ಲೆ ಮಾಡಿ ಚಿತ್ರ ಹಿಂಸೆ ನೀಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಹಲ್ಲೆಯಿಂದ ಸತೀಶ್ ಬೆನ್ನಿನಲ್ಲಿ ರಕ್ತದ ಕಲೆ ಬಾಸುಂಡೆಗಳು ಬಂದಿದೆ ಗಂಭೀರವಾಗಿ ಗಾಯಗೊಂಡ ಸತೀಶನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹೇಶ್, ವಿಠಲ್, ಸಿರಿಲ್, ಸುನಿಲ್, ಮಂಜು, ಕಟ್ಟೆ ಹುಕ್ಲು ಮಂಜು ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.