ಭಾರತದ ಖ್ಯಾತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಕೇಶ್ ಅಂಬಾನಿಯವರು ಜಾಗತಿಕ ಸಿಇಒ ಗಳ ಪೈಕಿ ಎರಡನೇ ಸ್ಥಾನ ಗಳಿಸಿದ್ದಾರೆ. ಮೊದಲನೇ ಸ್ಥಾನದಲ್ಲಿ ಟೆನ್ಸೆಂಟ್ ನ ಮಾ ಹುವಾಟೆಂಗಾ ಇದ್ದಾರೆ
ಬ್ರಾಂಡ್ ಫೈನಾನ್ಸ್ ಸಮೀಕ್ಷೆಯಲ್ಲಿ ಮುಕೇಶ್ ಅಂಬಾನಿ ಅವರಿಗೆ 81.3 ಅಂಕ ಮತ್ತು ಮಾ ಹುವಾಟೆಂಗಾಗೆ 81.6 ಅಂಕ ಸಿಕ್ಕಿದೆ. ಟಾಟಾ ಸೈನ್ಸ್ ಚೇರ್ಮನ್ ಎನ್ ಚಂದ್ರಶೇಖರನ್ ಐದನೇ ಸ್ಥಾನದಲ್ಲಿದ್ದಾರೆ, ಮಹೇಂದ್ರ ಹ್ಯಾಂಡ್ ಮಹೇಂದ್ರ ಸಿಇಒ ಅನಿಲ್ ಷಾ ಆರ್ನೆ ಸ್ಥಾನದಲ್ಲಿದ್ದಾರೆ, ಇನ್ಫೋಸಿಸ್ ನ ಸಲೀಲ್ ಪಾರೇಖ್ 16ನೇ ಸ್ಥಾನ ಗಳಿಸಿದ್ದಾರೆ.
ಭವಿಷ್ಯದ ಗ್ರಹಿಕೆಗಳು ಕಾರ್ಯಕ್ಷಮತೆಯ ಸ್ಪಷ್ಟ ಅಂಶಗಳ ಬೆಂಬಲ ಪಡಿಸುವ ಪ್ರಚಾರ ಅಂಶಗಳ ಆಧಾರದ ಮೇಲೆ ಬ್ರಾಂಡ್ ಫೈನಾನ್ಸ್ ಸಿಇಓ ಗಳನ್ನು ಮೌಲ್ಯಮಾಪನ ಮಾಡುತ್ತದೆ ಗ್ಲೋಬಲ್ 500 – 2024 ಎಂಬ ಶೀರ್ಷಿಕೆಯ ಇತ್ತೀಚಿನ ವರದಿಯಲ್ಲಿ ತುಲನಾತ್ಮಕವಾಗಿ ಹೊಸ ಬ್ರಾಂಡ್ ಎಲ್ಐಸಿ ಮತ್ತು ಎಸ್ ಬಿ ಐ ನಂತಹ ಭಾರತೀಯ ಬ್ರಾಂಡ್ಗಳನ್ನು ಹಿಂದೆ ಹಾಕಿ ಜಿಯೋ ಭಾರತದ ಪ್ರಬಲ ಬ್ರಾಂಡ್ ಎಂದು ಗುರುತಿಸಲ್ಪಟ್ಟಿದೆ. ಈ ಬ್ರ್ಯಾಂಡ್ ಫೈನಾನ್ಸ್ ನ 2023ರ ಶ್ರೇಯಾಂಕದಲ್ಲಿ ಭಾರತದ ಪ್ರಬಲ ಬ್ರಾಂಡ್ ಗಳಲ್ಲಿ ಅಗ್ರಸ್ಥಾನವೇರಿತು.