ಡಾಕ್ಟರ್ ಎ.ಪಿ.ಜೆ ಅಬ್ದುಲ್ ಕಲಾಂ 15 -10 -1931ರಲ್ಲಿ ತಮಿಳುನಾಡಿನ ರಾಮೇಶ್ವರಂ ನಲ್ಲಿ ಜನಿಸಿದರು. ಅವರನ್ನು ಭಾರತದ ಮಿಸೈಲ್ ಟೆಕ್ನಾಲಜಿಯ ಪಿತಾಮಹ ಎಂದು ಕರೆಯಲಾಗಿದೆ. ಅವರ ನಾಯಕತ್ವದಲ್ಲಿ ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ ಮತ್ತು ಭಾರತದ ಸೇನೆಗೆ ಬೇಕಾದ ಮಿಸೈಲ್ ಗಳು ನಿರ್ಮಾಣವಾದವು. ಅವರು ಭಾರತ ಸರ್ಕಾರಕ್ಕೆ ಪ್ರಮುಖ ವೈಜ್ಞಾನಿಕ ಸಲಹೆಗಾರರಾಗಿ ಸಹಕಾರಿಯ ನಿರ್ವಹಿಸಿದರು. ಭಾರತದ ರಾಷ್ಟ್ರಪತಿಗಳಾಗಿ ಭಾರತವನ್ನು 2020 ರೈ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡಲು ಯೋಜನೆಗಳನ್ನು ರೂಪಿಸಿದರು. 1997ರಲ್ಲಿ ಭಾರತರತ್ನ ಪ್ರಶಸ್ತಿ ಬಂದಿತು ಸುಮಾರು 30 ವಿಶ್ವವಿದ್ಯಾಲಯಗಳು ಅವರಿಗೆ ಡಾಕ್ಟರೇಟ್ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ. ಅವರು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಇಟ್ಟುಕೊಂಡು “ಎ ಮಿಷನ್ ಫಾರ್ ದಿ ನ್ಯೂ ಮೆಲೆನಿಯಂ”, “ಇಗ್ ನೈಟಡ್ ಮೈಂಡ್”, ಎಂಬ ಅತ್ಯಂತ ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ ಹಿಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಗುರಿಯನ್ನು ಇಟ್ಟುಕೊಂಡು ಲಕ್ಷಾಂತರ ವಿದ್ಯಾರ್ಥಿಗಳನ್ನು ಭೇಟಿ ಮಾಡುವ ಮೂಲಕ ಕಾರ್ಯಕ್ರಮ ಹಾಕಿಕೊಂಡು ಅವರಲ್ಲಿ ದೇಶಪ್ರೇಮ ಮತ್ತು ಭಾರತವನ್ನು 2020ರ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಲು ಹುರಿದಂಬಿಸಿದ್ದಾರೆ. ಈ ರೀತಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಜೊತೆಗೆ ದೇಶದ ಪ್ರತಿ ಒಬ್ಬ ಪ್ರಜೆಯು ನಮ್ಮ ಭಾರತವನ್ನು ಕಾಪಾಡಬೇಕು ಹಾಗೂ ಮುಂದಿನ ಪೀಳಿಗೆಯವರೆಗೂ ನೈಸರ್ಗಿಕ ಸಂಪನ್ಮೂಲಗಳು ದೊರೆಯುವಂತೆ ಕಾಪಾಡಬೇಕು. ಡಾಕ್ಟರ್ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ.