ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಪ್ರವೇಶಿಸಿದರೆ ಸಾಕು ಅಸಹ್ಯ ವಸ್ತುಗಳ ಪ್ರದರ್ಶನವಾಗುತ್ತದೆ. ಆಸ್ಪತ್ರೆ ಉದ್ಘಾಟನೆಯಾಗಿ ಮೂರು ವರ್ಷ ಕಳೆದರೂ ರೋಗಿಗಳಿಗೆ ಅದರ ಪ್ರಯೋಜನ ದೊರೆಯದಂತೆ ಇಲ್ಲಿನ ವ್ಯವಸ್ಥೆ ರೂಪಗೊಂಡಿದೆ.
ಅಂದಿನ ಶಾಸಕ ಕಳಕಪ್ಪ ಬಂಡಿ ಅವರಿಂದ ಆಸ್ಪತ್ರೆ ಲೋಕಾರ್ಪಣಿಗೊಂಡಿತು. ಆಸ್ಪತ್ರೆಗೆ ಸೂಕ್ತ ಸಿಬ್ಬಂದಿ ಉಪಕರಣಗಳು ಹಾಗೂ ಪರಿಕರಗಳನ್ನು ಒದಗಿಸಿಕೊಡುವ ಮುಂದಾಗಿ ಉದ್ಘಾಟನೆ ವೇಳೆ ಶಾಸಕರು ಭರವಸೆ ನೀಡಿದ್ದರು. ಮೇಲ್ನೋಟಕ್ಕೆ ನೋಡುವವರಿಗೆ ಆಸ್ಪತ್ರೆಗೆ ಹೊರಗಡೆಯಿಂದ ಬೇಗ ಹಾಕಿದೆ. ಆದರೂ ಒಳಗಡೆಯ ಚಿತ್ರಣವೇ ಬೇರೆ ರೀತಿ ಆಗಿದೆ. ಆಸ್ಪತ್ರೆ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇಲ್ಲಿನ ಆರೋಗ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು . ತೀರ್ವ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೆಸರಿಗಷ್ಟೇ ಹೈಟೆಕ್ ಆಸ್ಪತ್ರೆಯಾಗಿದ್ದು ಸಾಮಾನ್ಯ ರೋಗಿಗಳ ಪಾಲಿಗೆ ಇನ್ನು ಸೌಲಭ್ಯಗಳು ದೊರೆಯದೆ ಇರುವುದು ವಿಪರ್ಯಾಸವೆಂದಿದ್ದಾರೆ .
ಗಜೇಂದ್ರಗಡ ತಾಲೂಕಿನ ನರೇಗೆಲ್ ಪಟ್ಟಣ ವ್ಯಾಪ್ತಿಗೆ ಬರುವ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಡಳಿತವು ಈ ಕೂಡಲೇ ಇಲ್ಲಿನ ದುರಸ್ತಿಗೆ ಕಡಿವಾಣ ಹಾಕಿ, ಅಸಭ್ಯ ವಸ್ತುಗಳ ಪ್ರದರ್ಶನ ಹೊಸ ಕಟ್ಟಡದ ಕೊಠಡಿಯಲ್ಲಿ ಪ್ಯಾಕೆಟ್ ಹಾಗೂ ಬಳಕೆ ಮಾಡಿದ ಕಾಂಡೊಮ್ ಗಳೇ ಕಾಣಿಸುತ್ತಿವೆ.
ನೈತಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಕಡಿವಾಣ ಹಾಕಿ ಸರ್ಕಾರಿ ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಸಾರ್ವಜನಿಕರಿಗೆ ರೋಗಿಗಳಿಗೆ ತೊಂದರೆಯಾಗದಂತೆ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದು ಈ ಮೂಲಕ ಮಾಧ್ಯಮಕ್ಕೆ ತಿಳಿಸಿದ್ದಾರೆ.