ಭಾರತ್ ಜೋಡು ನ್ಯಾಯ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಿಗೆ ಹಾಕಿದ್ದ ಬೆಸ್ಕಾತ್ತನ್ನೇ ತೆಗೆದು ಕಾರ್ಯಕರ್ತನಿಗೆ ನೀಡಿರುವ ವಿಡಿಯೋ ವೈರಲ್ ಆಗಿದ್ದು. ರೋಡ್ ಶೋ ವೇಳೆ ಅವರ ಜೊತೆ ಒಂದು ನಾಯಿ ಇತ್ತು ಅದಕ್ಕೆ ರಾಹುಲ್ ಬಿಸ್ಕತ್ ಹಾಕುತ್ತಿದ್ದರು, ಆದರೆ ಆ ನಾಯಿ ಬಿಸ್ಕತ್ ತಿನ್ನುತ್ತಿರಲಿಲ್ಲ ಅದೇ ಸಮಯದಲ್ಲಿ ಇದ್ದ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿಯನ್ನು ಮಾತನಾಡಿಸಿದಾಗ ಆ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದರು. ಅದಾದ ಬಳಿಕ ಕಾರ್ಯಕರ್ತನ ಬಳಿ ನಗುತಲೆ ಮಾತನಾಡಿಲು ಆರಂಭಿಸಿದರು.
ಎಕ್ಸ್ ನಲ್ಲಿ ಬಿಜೆಪಿ ಐಟಿ ಸೇಲ್‌ನ ಅಮಿತ್ ಮಾಳವಿಯ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೂತ್ ಏಜೆಂಟ್ ರನ್ನು ನಾಯಿಗಳಿಗೆ ಹೋಲಿಸಿದ್ದಾರೆ.
ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ತನ್ನ ಕಾರ್ಯಕರ್ತರನ್ನು ನಾಯಿಯಂತೆ ನಡೆಸಿಕೊಂಡರೆ ಇಂತಹ ಪಕ್ಷಗಳು ಕಣ್ಮರೆ ಯಾಗುವುದು ಪಕ್ಕ ಎಂದು ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾನದವರೆಗೆ ನೀಡುವ ಅಗೌರವವೇ ಸೂಚಿಸುದ್ದಾಗಿದೆ.
ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಅಭಿವೃದ್ಧಿಯನ್ನು ಮಾತ್ರ ಬಯಸುತ್ತಾರೆ ಪಕ್ಷದವರು ಹಾಗೂ ಸಾಮಾನ್ಯ ಜನರಿಗೆ ಕೀಳಾಗಿ ಕಾಣುವ ಕಾಂಗ್ರೆಸ್ ನಾಯಕರಿಗೆ ಶಿಕ್ಷೆಯಾಗಬೇಕು. ಬಿಜೆಪಿ ನಾಯಕರು, ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.