ಬೆಂಗಳೂರು :
ಫೆಬ್ರವರಿ 8ರಂದು ವಿಧಾನಸೌಧದ ಮುಂಭಾಗ ರಾಜ್ಯಮಟ್ಟದ ಎರಡನೇ ಜನ ಸ್ಪಂದನ ಕಾರ್ಯಕ್ರಮಕ್ಕೆ ಸಿದ್ಧತಾ ಕಾರ್ಯ ಆರಂಭವಾಗಿದೆ. ಕಾರ್ಯಕ್ರಮಕ್ಕೆ ಅತಿ ಹೆಚ್ಚು ಜನರು ಬರುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನಗಳ ಮೊದಲ ವಿಧಾನಸೌಧದ ಗೇಟ್ ನಂಬರ್ ವನ್ ಮುಚ್ಚಲಾಗಿದೆ ವಿಧಾನಸೌಧದ ಪೊಲೀಸರು ಇದೇ ಗೇಟ್ನಿಂದ ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳು ಸಂಚಾರಿ ಸಿಬ್ಬಂದಿ ಮಾಡು .ಇದೀಗ ಯಾರೇ ವಿಧಾನಸೌಧಕ್ಕೆ ಎಂಟ್ರಿ ಕೊಡಬೇಕಾದರೂ ಗೇಟ್ ನಂಬರ್ 2 ರ ಮೂಲಕ ಹೋಗಬೇಕು. ಗುರುವಾರ ನಡೆಯಲಿರುವ ಜನಸ್ಪಂದನ ಕಾರ್ಯಕ್ರಮಕ್ಕೆ ಸಿದ್ಧತೆ ಬರದಿಂದ ಸಾಗಿದೆ. ಇದೇ ಮೊದಲನೇ ಬಾರಿಗೆ ವಿಧಾನಸೌಧದಲ್ಲಿ ಸಿಎಂ ಜೊತೆ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ, ವಿಧಾನಸೌಧದ ಆವರಣದ ಗ್ಯಾರಂಟಿ ಸ್ಟೆಪ್ಸ್ನ ಬಳಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಬೃಹತ್ ಜರ್ಮನ್ ಟೆಂಟ್ ಹಾಕಲಾಗುತ್ತಿದೆ. ಏಕಕಾಲಕ್ಕೆ ಎಲ್ಲಿಯವರೆಗೆ 1000 ಜನರು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಎಂದು ಸೂಚಿಸಲಾಗಿದೆ.
ಎರಡನೇ ಜನಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳು, ಕಾರ್ಯದರ್ಶಿಗಳು, ಇಲಾಖೆಯ ಮುಖ್ಯಸ್ಥರು, ಭಾಗವಹಿಸಿದ್ದು ವಿಶೇಷ ಆಸಕ್ತಿ ವಹಿಸಿ ಸ್ಥಳದಲ್ಲೇ ಕುಂದು ಕೊರತೆ ನಿವಾರಣೆಗೆ ಆಗಮಿಸುವ ವಿಶೇಷ ಚೇತನರನ್ನು ಹಿರಿಯ ನಾಗರಿಕರಿಗೆ ವಿಶೇಷ ವ್ಯವಸ್ಥೆ ಜೊತೆಗೆ ಜನರ ಅನುಕೂಲಕ್ಕಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ಕೇಂದ್ರ ನಿಲ್ದಾಣಕ್ಕೆ ಉಚಿತ ಬಸ್ಸಿನ ವ್ಯವಸ್ಥೆ ಕುಡಿಯುವ ನೀರು ಉಪಹಾರ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನವೆಂಬರ್ 27 ರಂದು ಮೊದಲ ಜನಸ್ಪಂದನ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯನವರು ಬರೋಬ್ಬರಿ 3812 ಮಂದಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು. ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲಿಯೇ ಪರಿಹರಿಸಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಿಗೆ ಪ್ರಕಟಣೆ ತಿಳಿಸಿದೆ.