ಗೋಕರ್ಣ : ಪ್ರವಾಸಕ್ಕೆಂದು ಆಗಮಿಸಿದ ಜಪಾನ್ ಮೂಲದ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದ ಜಪಾನ್ ಮೂಲದ ಪ್ರವಾಸಿ ಮಹಿಳೆಯನ್ನು ಎಮಿ ಯಮಾಝಕಿ 43 ವರ್ಷ ಎಂದು ಗುರುತಿಸಲಾಗಿದೆ.
ಫೆಬ್ರವರಿ 4ರಂದು ಗೋಕರ್ಣದ ಬಂಗ್ಲೆಗುಡ್ಡ ನೇಚರ್ ಕಾಲೇಜಿನಲ್ಲಿ ತನ್ನ ಪತಿಯ ಜೊತೆ ತಂಗಿದ್ದರು. ಫೆಬ್ರವರಿ 5 ರಂದು ಬೆಳಗ್ಗೆ 10 : 15 ಸಮಯಕ್ಕೆ ಪತಿ ಮಲಗಿದ್ದ ವೇಳೆ ನೇಚರ್ ಕಾಲೇಜಿನಿಂದ ಹೊರ ಹೋಗಿದ್ದ ಮಹಿಳೆ ವಾಪಸ್ ಬಂದಿಲ್ಲ. ಈ ಬಗ್ಗೆ ಮಹಿಳೆಯ ಪತಿ ರೈ ಯಮಾಝಕಿ ಯಿಂದ ದ ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗೋಕರ್ಣದ ಓಂ ಬೀಚಿನಲ್ಲಿ ಸುಮಾರು ಐದು ತಾಸುಗಳ ವರೆಗೆ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದು ಬೀಚಿನ ಸುತ್ತಮುತ್ತಲಿನ ವಾತಾವರಣ ಬಾಟಲಿ, ಕಸ ಕಡ್ಡಿ, ಬಟ್ಟೆ ಮುಂತಾದವುಗಳನ್ನು ತೆಗೆದು ಹಾಕುತ್ತಾ ಇಲ್ಲಿನ ಸೌಂದರ್ಯವನ್ನು ಸವಿಯುತ್ತಾ ಹಾಗೂ ಸುತ್ತಮುತ್ತಲಿನ ಜನರು ಹೋಟೆಲ್ ಮಾಲೀಕರು, ಸಣ್ಣ ಪುಟ್ಟ ಮಕ್ಕಳು, ಸೇರಿದಂತೆ ಸಂಘದ ಕಾರ್ಯಕರ್ತರು, ಎಲ್ಲರೂ ಒಟ್ಟಿಗೆ ಸೇರಿ ಇವರ ಜೊತೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ರೀತಿ ಮಾಡುವುದು ಜಪಾನ್ ಮೂಲದ ಮಹಿಳೆಗೆ ತುಂಬಾ ಆಸಕ್ತಿ ಇತ್ತು ಅವರು ಸ್ಥಳೀಯರನ್ನು ಒಟ್ಟುಗೂಡಿಸಿಕೊಂಡು ಗೋಕರ್ಣದ ಸುಂದರ ತಾಣಗಳನ್ನು ಸಹ ವೀಕ್ಷಿಸುತ್ತಾ ಇದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡುವುದು ಹೇಗೆ ಎಂದು ಜನರಿಗೆ ತೋರಿಸಿಕೊಟ್ಟರು ನಮ್ಮ ಜಲ, ನಮ್ಮ ಗಾಳಿ, ನಮ್ಮ ನೀರು, ನಮ್ಮ ಪ್ರಕೃತಿ ಎಂಬಂತೆ ಎಮಿ ಯಮಾಝಕಿ ತೋರಿಸಿಕೊಟ್ಟರು.
ಈ ರೀತಿ ಭಾರತದ ನೆಲದಲ್ಲಿ ಪ್ರವಾಸಕ್ಕೆಂದು ಬಂದು ಗೋಕರ್ಣದ ಸುತ್ತಮುತ್ತಲು ತನ್ನ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಸುಮಾರು ಬೆಳಗ್ಗೆ 10:15ಕ್ಕೆ ಹೋದವರು ವಾಪಸ್ ಬಂದಿಲ್ಲ. ಈ ಮಹಿಳೆ ಎಲ್ಲಿ ಹೋಗಿರುವುದು ಎಂಬುದು ಸದ್ಯದ ಮಟ್ಟಿಗೆ ತಿಳಿದು ಬಂದಿಲ್ಲ ಇವರ ಬಗ್ಗೆ ತನಿಖೆ ಚುರುಕು ಮಾಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದರು.