ಚೆನ್ನೈ : ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾದ ನಟಿ ಕಾಸಮ್ಮಲ್ (71 ವರ್ಷ) ರವರು ತಮಿಳುನಾಡಿನ ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಸಮೀಪದ ಅನೈಯೂರಿನಲ್ಲಿ ಈ ಘಟನೆ ನಡೆದಿದ್ದು.
ಮಧ್ಯ ಖರೀದಿಸಲು ಹಣಕ್ಕಾಗಿ ತಾಯಿ ಮತ್ತು ಮಗನ ಮಧ್ಯೆ ಜಗಳ ನಡೆದಿದೆ ಈ ಗಲಾಟೆ ತಾರಕಕ್ಕೇರಿ ಮಗ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮವಾಗಿ ಕಾಸಮ್ಮಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಲಾಗಿದೆ.
ಇವರು ವಿಜಯ ಸೇತುಪತಿ ಮತ್ತು 85 ವರ್ಷದ ನೆಲ್ಲಂದಿ ಅವರು “ಕಡೈಸಿ ವಿವಸಾಯಿ” (ಕೊನೆಯ ರೈತ) ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅನೇಕ ಹಳ್ಳಿಗಳನ್ನು ಒಳಗೊಂಡಿತ್ತು ವಿಜಯ್ ಸೇತುಪತಿ ಅವರ ಚಿಕ್ಕಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಈ ಪ್ರಕರಣವು ಉಸಿಲಂಪಟ್ಟಿಯ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಾಸಮ್ಮಲ್ ರವರ ಮಗನನ್ನು ವಶಕ್ಕೆ ಪಡೆದು ಆರೋಪಿಯನ್ನು ಕೋರ್ಟಿಗೆ ಒಪ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.