ಇಸ್ಲಾಮಾಬಾದ್ : ಬಲೂಚಿಸ್ತಾನ್ ಪ್ರಾಂತ್ಯದ ಪಿಶಿನ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಪ್ರಾಂತೀಯ ಸರ್ಕಾರದ ವಾಕ್ತಾರ ಜನ್ ಅಚ್ಝಕೈ ಹೇಳಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸತ್ ಚುನಾವಣೆಗೂ ಮುನ್ನಾ ದಿನವಾದ ಬುಧವಾರ ಪಾಕಿಸ್ತಾನದ ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಕಚೇರಿಯಲ್ಲಿ ಎರಡು ಬಾಂಬ್ ಸ್ಪೋಟಗಳು ಸಂಭವಿಸಿದ್ದು, ಕನಿಷ್ಠ 26 ಹೆಚ್ಚು ಜನ ಸಾವನ್ನಪ್ಪಿದ್ದಾರೆ ಮತ್ತು 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಶಿನ್ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಜುಮ್ಮಾ ರಾಜ್ ಖಾನ್ ಅವರು ಸ್ಫೋಟದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಚುನಾವಣಾ ನೀತಿ ಸಮಿತಿ ಜಾರಿಯಲ್ಲಿದ್ದರೂ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಬಲೂಚಿಸ್ತಾನದಲ್ಲಿ ಇತ್ತೀಚಿಗೆ ಉಗ್ರರ ದಾಳಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಂತಿ , ಸುವ್ಯವಸ್ಥೆ, ಕಾಪಾಡಬೇಕೆಂದು ಪಾಕಿಸ್ತಾನದಾದ್ಯಂತ ಹತ್ತಾರು ಪೊಲೀಸ್ ಮತ್ತು ಅರೆ ಸೈನಿಕ ಪಡೆಗಳನ್ನು ನಿಯೋಜಿಸಿದರು ಸಹ ಬಾಂಬ್ ಸ್ಫೋಟಗೊಂಡಿದೆ.