ಬೆಂಗಳೂರು : ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಕನ್ನಡಿಗರಿಗೆ ನ್ಯಾಯಯುತ ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ, ಡಿಕೆ ಶಿವಕುಮಾರ್, ಸರ್ಕಾರದ ಎಲ್ಲಾ ಸಚಿವರು ಮತ್ತು ಕಾಂಗ್ರೆಸ್ ನ ಎಲ್ಲ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ.
ಆದರೆ ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಘೋಷಿಸಲಾಗಿದೆ. ಆದ್ದರಿಂದ ದೆಹಲಿಯಲ್ಲಿ ದಿನಾಂಕ 7 – 2-2024 ರಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ. ಇದರಂತೆ ದೆಹಲಿ ಗುರುತಿಸಲು ರಾಜ್ಯ ಸರ್ಕಾರಕ್ಕೆ ಸ್ಥಳವನ್ನು ಹೊಂದಿದೆ. ಅದೇ ಸ್ಥಳದಲ್ಲಿ ಪ್ರತಿಭಟನೆಯನ್ನು ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ. ಆದರೆ ಸ್ಥಳವನ್ನು ನೀಡುವಾಗ ದೆಹಲಿ ನಿಬಂಧನೆಗಳನ್ನು ವಿಧಿಸಲಾಗಿದೆ. ಪ್ರತಿಭಟನಾಕಾರರಿಗೆ ಸಮಯ ನಿಗದಿತ ಸೂಚನೆ ನೀಡಿದ್ದು ಬೆಳಗ್ಗೆ 10.30 ರಿಂದ 12:30 ರ ವರೆಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಎಂದು ಈ ಪ್ರತಿಭಟನೆಯನ್ನು ನಡೆಸಲು ದೆಹಲಿ ಸೂಚನೆ ಸೂಚನೆ.
ಕೇಂದ್ರ ಸರ್ಕಾರದ ಮುಂದೆ ಪ್ರಮುಖ ಏಳು ಬೇಡಿಕೆಗಳನ್ನು ಮುಂದಿಟ್ಟ ರಾಜ್ಯ ಸರ್ಕಾರವು ಪ್ರತಿಭಟನೆಯನ್ನು ಮಾಡಲಿದೆ. ಈ ಚಳುವಳಿ ವಿರುದ್ಧವೂ ಇದು ಕರುನಾಡ ಹಾಗೂ ಕನ್ನಡಿಗರ ಹಿತಕ್ಕಾಗಿ ಪಕ್ಷತೀತವಾಗಿಯೂ ಎಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಎಂದು ಸಿಎಂ ಸಿದ್ದರಾಮಯ್ಯನವರು ಕರೆಕೊಟ್ಟಿದ್ದಾರೆ.
ಕರ್ನಾಟಕ ಸರ್ಕಾರದ 7 ಪ್ರಮುಖ ಬೇಡಿಕೆಗಳು
- 2023 24ರಲ್ಲಿ ಕರ್ನಾಟಕದಲ್ಲಿ ಬರ ಪರಿಹಾರ ರೂ 18177 ಕೋಟಿ ಕೊಡಬೇಕು.
- ಐದು ವರ್ಷಗಳ ತೆರಿಗೆ ಬಾಕಿ ಹಣ ರೂ 62,098 ಕೋಟಿ
- ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆಯಾಗಿರುವ ರೂ 5300 ಕೋಟಿ ರಿಲೀಸ್ ಮಾಡಬೇಕು.
- ಘೋಷಿಸಲಾದ ತೆರಿಗೆ ವಿಶೇಷ ಅನುದಾನ ರೂ 5495 ಕೋಟಿ ಬಾಕಿ ಬಿಡುಗಡೆ ಮಾಡಬೇಕು.
- 2021 ರಿಂದ 2023ರ ವರೆಗೆ ಸಹಭಾಗಿತ್ವ ಯೋಜನೆ ಅನುದಾನ 33,000 ಕೋಟಿ ರಿಲೀಸ್ ಮಾಡಬೇಕು.
- ಒಟ್ಟಾರೆ 2017-18 ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ 1.87 ಲಕ್ಷ ಕೋಟಿ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು.
- ಕರ್ನಾಟಕಕ್ಕೆ ಏಮ್ಸ್ ಆಸ್ಪತ್ರೆ ಘೋಷಣೆ ಮಾಡಬೇಕು. ಮಹದಾಯಿ ಯೋಜನೆಗೆ ಮನ್ನಣೆ ನೀಡಲಾಗಿದೆ. ಈ ರೀತಿಯಾಗಿ ಕರ್ನಾಟಕ ಸರ್ಕಾರವು ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟು ಇಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಪ್ರತಿಭಟನೆಯನ್ನು ಆರಂಭಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಕಾರ್ಯಕ್ರಮಗಳನ್ನು ನಡೆಸಿದರು.