ಚಿತ್ರದುರ್ಗ : ದಿವ್ಯ ಪ್ರಭು ರವರು ಅಕ್ಟೋಬರ್ 22 – 2022 ರಂದು ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಇದೀಗ ಇವರನ್ನು ಧಾರವಾಡದ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ. 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದು.
ಚುನಾವಣಾ ಆಯೋಗವು ಪ್ರತಿ ವರ್ಷ ಜನವರಿ 25ರಂದು ಹಮ್ಮಿಕೊಳ್ಳುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ದಿವ್ಯ ಪ್ರಭು ಅವರಿಗೆ “ರಾಷ್ಟ್ರಪತಿ” ಪ್ರಶಸ್ತಿ ದೊರೆತಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಡಿಯಲ್ಲಿ ಉತ್ತಮ ಸೇವೆ ಸಲ್ಲಿಸಿರುವುದರಿಂದ ಇವರಿಗೆ ಈ ಪ್ರಶಸ್ತಿ ದೊರೆತಿದೆ.
ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಯಾಗಿ ಟಿ ವೆಂಕಟೇಶ್ ರವರು ದಿನಾಂಕ 23 – 1 – 2024 ರಂದು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ದಿವ್ಯ ಪ್ರಭು ರವರು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ತಮ್ಮ ಸೇವೆಯನ್ನು ಉತ್ತಮವಾಗಿ ನಡೆಸಿದ್ದು, ಎಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಹಾಗೂ ಇವರಿಗೆ ದಿನಾಂಕ ಫೆಬ್ರವರಿ 9ರಂದು ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದು. ನೂತನ ಜಿಲ್ಲಾಧಿಕಾರಿಯಾಗಿ ಟಿ ವೆಂಕಟೇಶ್ ರವರನ್ನು ಸ್ವಾಗತ ಕೋರುವ ಸಮಾರಂಭವನ್ನು ತಾ.ರಾ.ಸು ರಂಗಮಂದಿರದಲ್ಲಿ ಏರ್ಪಡಿಸಿದೆ ಎಂದು ಚಿತ್ರದುರ್ಗ ಜಿಲ್ಲಾ ಆಡಳಿತವು ಸುದ್ದಿಗಾರರೊಂದಿಗೆ ತಿಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಚಿತ್ರದುರ್ಗ ಜಿಲ್ಲೆಯ ಜನಪ್ರಿಯ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಎಚ್. ಆಂಜನೇಯ, ಮಾಜಿ ಸಂಸದರು ಬಿ .ಎನ್. ಚಂದ್ರಪ್ಪ , ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಇನ್ನು ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.