ಪುಷ್ಪ ಸಿನೆಮಾ ಗೆದ್ದು ಬೀಗಿದ ಬೆನ್ನಲ್ಲೇ ಪುಷ್ಪ 2 ಚಿತ್ರ ಕೂಡ ಬೆಳ್ಳಿ ಪರದೆಯಲ್ಲಿ ರಾರಾಜಿಸಲು ಸಕಲ ಸಿದ್ಧತೆಗಳು ನಡೆದಿವೆ ಎಂದು ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ರವರು ಹೇಳಿದ್ದಾರೆ.
ಇದರ ಜೊತೆಗೆ ಅಲ್ಲು ಅರ್ಜುನ್ ಪುಷ್ಪಾ ಸಿನಿಮಾದ ನಂತರ ಬಾರಿ ಸುದ್ದಿಯಾಗಿದೆ. ಅಭಿಮಾನಿಗಳಿಗೆ ರಂಜಿಸಲು ಅಲ್ಲು ಅರ್ಜುನ್ ರವರು ಪುಷ್ಪ 2 ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದು ಇದರ ಟ್ರೈಲರ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದ್ದು ಇದರ ಬೆನ್ನಿನಲ್ಲೇ ಬಾಹುಬಲಿ ,ಕೆಜಿಎಫ್, ಸಿನಿಮಾದ ರೀತಿಯಲ್ಲಿ ಪುಷ್ಪಾ – 3 ಕೂಡ ಮಾಡುವ ನಿರೀಕ್ಷೆ ಇದೆ ಎಂದು ನಿರ್ದೇಶಕ ಸುಕುಮಾರ್ ಹೇಳಿದ್ದಾರೆ.
ಪುಷ್ಪಾ ದಿ ರೈಸ್ ಸಿನಿಮಾದಲ್ಲಿ ಪುಷ್ಪರಾಜ್ – ಶ್ರೀವಲ್ಲಿ ಕಾಂಬಿನೇಷನ್ ಮೋಡಿ ಮಾಡಿತ್ತು. ಅಲ್ಲು ಅರ್ಜುನ್ ಯುನಿಕ್ ಸ್ಟೈಲ್, ಶ್ರೀವಲ್ಲಿ ಅಭಿನಯ ಮತ್ತು ಡ್ಯಾನ್ಸ್ ಎಲ್ಲವೂ ಟ್ರೆಂಡಿಂಗ್ ಕ್ರಿಯೇಟ್ ಮಾಡಿತ್ತು. ಈಗ ಅದೇ ಹುರುಪಿನಲ್ಲಿ ಪುಷ್ಪ 2 ಚಿತ್ರ ಅಗಸ್ಟ್ 15ಕ್ಕೆ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಮೊದಲನೇ ಭಾಗ ಭಾಗದಲ್ಲಿ ಕಾರ್ಮಿಕನಂತೆ ಪುಷ್ಪಾರಾಜ್ ರಕ್ತ ಚಂದನ ಕಳ್ಳ ಸಾಗಾಣಿಕೆ ಮಾಡುತ್ತಾನೆ ಇದರಲ್ಲಿ ಕಿಂಗ್ ಪಿನ್ ಆಗಿ ಬೆಳೆಯುತ್ತಾನೆ. ರಕ್ತ ಚಂದನ ಜಪಾನಿಗೆ ರಪ್ತಾಗಲಿದೆ ಎಂದು ತೋರಿಸಲಾಗುತ್ತಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಿಷ್ಟು ಕಥೆ ವಿದೇಶದಲ್ಲೇ ಸಾಗಲಿದೆ. ನಂತರ ಪುಷ್ಪಾ 3ರ ಕಥೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಈ ಸುದ್ದಿಯು ಎಷ್ಟರ ಮಟ್ಟಿಗೆ ನಿಜನಾ ಅಥವಾ ಸುಳ್ಳಾ ? ಎಂದು ಚಿತ್ರತಂಡದಿಂದ ಅಧಿಕೃತ ಅಪ್ಡೇಟ್ ಸಿಗುವವರೆಗೂ ಕಾಯಬೇಕಿದೆ.
ಈ ರೀತಿಯ ಕಥೆಗಳನ್ನು ನೋಡಿ ಮೆಚ್ಚಿ ಅದರಲ್ಲಿ ಪುಷ್ಪಾನ ವಿಚಾರಗಳು ತುಂಬಾ ರಮಣೀಯವಾಗಿ ಮೂಡಿಬಂದಿದ್ದು, ಡೈಲಾಗ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ನಲ್ಲಿ ಕಾಣಿಸಿಕೊಂಡಿದ್ದು ತಗ್ಗಿದೆ – ತೆಲುಗಿನಲ್ಲಿ , ಹಿಂದಿಯಲ್ಲಿ – ಜುಕೇಘ ನಹಿ ಎಂದು ಕಮಲ್ ಮಾಡಿರುವ ಪುಷ್ಪ ಸಿನಿಮಾದ ಪ್ರೇರಣೆಯಿಂದ ಪುಷ್ಪ 2 ಮಾಡಿದ್ದು ಅದೇ ರೀತಿ ಪುಷ್ಪ 2 ನೋಡಿದ ನಂತರ ಜನರ ಅಭಿಪ್ರಾಯ ಹಾಗೂ ಸಿನಿಮಾ ಹಿಟ್ ಆಗುವ ನಿರೀಕ್ಷೆ ಇದೆ. . ಪುಷ್ಪಾ ಸಿನಿಮಾವು ಅವನು ಯಾವ ರೀತಿ ಮುಂದೆ ಸಾಗುತ್ತಾನೆ ಎಂದು ತಿಳಿಸುತ್ತದೆ.