ಹಿರಿಯೂರು ತಾಲ್ಲೂಕಿನ ರಂಗೇನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದು ಜನ ಶಿಕ್ಷಕರಿದ್ದು ಇಬ್ಬರು ಅತಿಥಿ ಶಿಕ್ಷಕರು ಇದ್ದಾರೆ. ಸುಮಾರು ಈ ಶಾಲೆಯಲ್ಲಿ 149 ಮಕ್ಕಳಿದ್ದು. ಶಿಕ್ಷಕರ ಒಳ ಜಗಳಕ್ಕೆ ಬೇಸತ್ತು ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿಂದೆ ಶಿಕ್ಷಕರು ಸುಮಾರು ಬಾರಿ ಜಗಳ ಆಡಿರುವುದು ಬೆಳಕಿಗೆ ಬಂದಿದೆ. ಮತ್ತೆ ಅದೇ ರೀತಿ ತಮ್ಮ ಹಳೇ ಚಳಿಯನ್ನೇ ಮುಂದುವರೆಸಿದ್ದಾರೆ. ಇವರು ಶಿಕ್ಷಣ ಕೊಡುವುದು ಬಿಟ್ಟು ತಮ್ಮ ವೈಯಕ್ತಿಕ ವಿಚಾರಕ್ಕೆ ಕಿತ್ತಾಟ ಶುರು ಮಾಡಿದ್ದಾರೆ. ಇದರಿಂದ ಪೋಷಕರಿಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದ ಶಿಕ್ಷಕರಿಗೆ ಎಷ್ಟು ಬುದ್ಧಿ ಇದೆ ಎಂದು ಅವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಮತ್ತು ಶಿಕ್ಷಕರು ಅವರ ಘನತೆ ಗೌರವವನ್ನು ಲೆಕ್ಕಿಸದೆ ಬೀದಿ ನಾಯಿಗಳ ರೀತಿಯಾಗಿ ಜಗಳ ಮಾಡುತ್ತಿದ್ದಾರೆ. ಶಿಕ್ಷಕರು ತಮ್ಮ ಪ್ರತಿಷ್ಠೆಗೆ ಬಿದ್ದು ಮಕ್ಕಳಿಂದ ಎರಡೆರಡು ಬಾರಿ ಪ್ರಾರ್ಥನೆ ಮಾಡಿ ಒಳ ಜಗಳದ ಆಕ್ರೋಶವನ್ನು ವ್ಯಕ್ತಪಡಿಸಿದ ಉದಾಹರಣೆ ಸಾಕಷ್ಟಿವೆ. ಮಕ್ಕಳ ಭವಿಷ್ಯದ ಜೊತೆ ಈ ರೀತಿ ಕೃತ್ಯ ಮಾಡಿರುವುದು ಶೋಚನೀಯವಾಗಿದೆ.
ತಮ್ಮ ಮಕ್ಕಳ ವಿದ್ಯಾಭ್ಯಾಸ ಇಲ್ಲದಿದ್ದರೂ ಬೇಡ ಶಾಲೆ ನಾವು ಬೇಗ ಹಾಕುತ್ತೇವೆ ಎಂದು ಅಲ್ಲಿನ ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರನ್ನು ಶಾಲೆಯಿಂದ ಹೊರಗೆ ಕಳುಹಿಸಿ ಬೀಗ ಹಾಕಿದ್ದರು. ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಶಾಲೆಗೆ ಬರಬೇಕು ಮತ್ತು ಶಾಲೆಯನ್ನು ತೆರೆಯಲಾಗುವುದಿಲ್ಲ ಎಂದು ಹೇಳಿದರು. ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಬೇಕು. ಈ ವಿಷಯ ತಿಳಿದ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಸಮಾಧಾನಪಡಿಸಿದರು. ಮತ್ತು ತಕ್ಷಣವೇ ಶಾಲೆಯನ್ನು ತೆರೆಯುವಂತೆ ಮನವಿ ಮಾಡಿದರು. ಶಾಲಾ ಶಿಕ್ಷಕರ ಬದಲಿಗೆ ಶಾಶ್ವತ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಈ ರೀತಿಯಾಗಿ ಮುಂದೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ರಂಗೇನಳ್ಳಿಯ ಗ್ರಾಮಸ್ಥರಿಗೆ ಕಳುಹಿಸಲಾಗಿದೆ.