ಬೆಂಗಳೂರು : ಕರ್ನಾಟಕದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನದಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರವು ಇಂದು ಕಾಲರ್ ಐಡಿ ಮತ್ತು ಸ್ಪ್ಯಾಮ್ ನಿರ್ಬಂಧಿಸುವ ಅಪ್ಲಿಕೇಶನ್ ಟ್ರೂ ಕಾಲರ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಸಹಯೋಗವು ನಾಗರಿಕರಿಗೆ ಡಿಜಿಟಲ್ ಸುರಕ್ಷತೆ ನೀಡಲು ಸಹಾಯ ಮಾಡಲಿದೆ ಈ ಸಹಯೋಗದ ಅಡಿಯಲ್ಲಿ ರಾಜ್ಯದ ನಾಗರಿಕರಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಟ್ರೂ ಕಾಲರ್ ಉಪಕ್ರಮಗಳ ಸರಣಿ ನಡೆಸಲಿದೆ.
ಈ ಮೂಲಕ ನಾಗರಿಕರನ್ನು ಡಿಜಿಟಲ್ ವಂಚನೆಗೆ ಒಳಗಾಗದಂತೆ ತಡೆಯಲಿದೆ ಇದು ಅವರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿಸಲು ಮತ್ತು ಡಿಜಿಟಲ್ ಸಮೂಹನ ಸಾಧನೆಗಳನ್ನು ಜವಾಬ್ದಾರಿಯುತವಾಗಿ ಬಳಸಲು ಅವರಿಗೆ ಅನುವು ಮಾಡಿಕೊಡುತ್ತದೆ.
ಡಿಜಿಟಲ್ ಸಂವಹನಗಳ ಬಳಕೆ ಬಗ್ಗೆ ಹಾಗೂ ವಂಚನೆಗೆ ಒಳಗಾಗದಂತೆ ತಡೆಯುವ ನಿಟ್ಟಿನಲ್ಲಿ ಟ್ರೂ ಕಾಲರ್ ಕನ್ನಡದಲ್ಲಿಯೂ ತರಬೇತಿ ನೀಡಲಿದೆ ಎಂದು ಹೇಳಿದ್ದಾರೆ.