ಮಂಡ್ಯ : ತಾಲೂಕಿನ ಕೆರಗೋಡು ಹನುಮಾನ್ ಧ್ವಜ ತೆರವು ಖಂಡಿಸಿ ನಾಳೆ ಬಜರಂಗದಳ ಸೇರಿದಂತೆ ಹಲವು ಹಿಂದು ಪರ ಸಂಘಟನೆಗಳು ಮಂಡ್ಯ ನಗರ, ಕೆರಗೋಡು ಗ್ರಾಮ ಬಂದಿದೆ ಕರೆ ಕೊಟ್ಟಿದ್ದೆ.
ಬಜರಂಗದಳ ವಿಶ್ವ ಹಿಂದೂ ಪರಿಷತ್ ಶ್ರೀರಾಮ ಭಜನಾ ಮಂದಿರದ ಮಂಡಳಿಯವರು ಬಂದ್ಗೆ ಕರೆ ನೀಡಿದ್ದು ಇಂದು ನಡೆಯುವ ಸಭೆಯ ನಂತರ ಬಿಜೆಪಿ ಬೆಂಬಲ ಸೂಚಿಸುವ ಸಾಧ್ಯತೆ ಇದೆ.
ಈ ಹಿನ್ನಲೆ ಇಂದು ಮಧ್ಯಾಹ್ನ ಜಿಲ್ಲಾ ಬಿಜೆಪಿ ಸಭೆ ಕರೆದಿದ್ದು ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಪ್ರತಿಭಟನೆಯಲ್ಲಿ ಕೈಗೊಳ್ಳುವ ಮೈತ್ರಿ ಪಕ್ಷ ಜೆಡಿಎಸ್ ಮಂಡ್ಯ ಬಂದ್ ನಿಂದ ಅಂತರ ಕಾಯ್ದುಕೊಂಡಿದೆ.
ಫೆಬ್ರವರಿ 9ರ ಬಂದ್ ಬೆಂಬಲದ ಬಗ್ಗೆ ಜೆಡಿಎಸ್ ಅಭಿಪ್ರಾಯ ತಿಳಿಸಿಲ್ಲ ಮಾಜಿ ಪ್ರಧಾನಿಯೂ ಹಾಗಿರುವ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪ್ರತಿಭಟನೆಯಲ್ಲಿ ಕೇಸರಿ ಶಾಲು ಹಾಕಬಾರದಿತ್ತು ಹಸಿರು ಶಾಲು ಹಾಕಬೇಕಿತ್ತು ಎಂಬ ಹೇಳಿಕೆಯಿಂದಲೇ ಕುಮಾರಸ್ವಾಮಿ ಮತ್ತು ಇತರ ನಾಯಕರು ಹಿಂದೆ ಸರಿದಿದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ ಇದೀಗ ಸಮಾನ ವಯಸ್ಕರ ವೇದಿಕೆಗೆ ದಲಿತಪರ ಸಂಘಟನೆ, ಪ್ರಗತಿಪರ ಸಿಐಟಿಯು ಸೇರಿದ ಹಲವು ಸಂಘಟನೆಗಳು ಬೆಂಬಲ ನೀಡಿದವು. ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ವಯಸ್ಕರ ವೇದಿಕೆ ತಾತ್ಕಾಲಿಕವಾಗಿ ಬಂದ್ ಹಿಂದೆ ಪಡೆದಿದೆ.
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜನವರಿ 28ರಂದು ಅರ್ಜುನ ಧ್ವಜ ಸ್ತಂಭದ ಮೇಲೆ ಹನುಮಾನ್ ಧ್ವಜವನ್ನು ಇಳಿಸಿ ತ್ರಿವರ್ಣ ಧ್ವಜವನ್ನು ಜಿಲ್ಲಾಡಳಿತ ಸಾಧಿಸಿತ್ತು. ಇದನ್ನು ವಿರೋಧಿಸಿ ಬಿಜೆಪಿ ಜೆಡಿಎಸ್ ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬೃಹತ್ ಹೋರಾಟ ನಡೆಸಿದರು ಅದಾದ ಬಳಿಕ ಕೆರಗೋಡು ಗ್ರಾಮದಲ್ಲಿ ನೂರಾರು ಮನೆಗಳ ಮೇಲೆ ಹನುಮಾನ್ ಧ್ವಜ ಹಾರಿಸಲಾಯಿತು ಇದರ ಬೆನ್ನಿನಲ್ಲೇ ನಾಳೆ ಮಂಡ್ಯ ಬಂದ್ ಗೆ ಕರೆ ಕೊಟ್ಟಿದೆ ಈ ಅಭಿಯಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ ನೇತೃತ್ವದಲ್ಲಿ ಮಂಡ್ಯ ನಗರದಲ್ಲಿ ಹಲವು ಅಭಿಯಾನ ನಡೆಸಿ ಹನುಮಾನ್ ಧ್ವಜ ಹಾರಿಸುವ ಮೂಲಕ ಬಂದ್ ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡಿದ್ದಾರೆ