ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಕ್ಯಾಬಿನೆಟ್ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದರು .ಸಚಿವ ಎಚ್ ಕೆ ಪಾಟೀಲ್ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಮಾಹಿತಿಯನ್ನು ನೀಡಿದರು ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದ್ದು 20,000ಕ್ಕೂ ಹೆಚ್ಚು ಮಂದಿ ಬಂದಿದ್ದು 12,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ವಸತಿ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹೇಗೆ ಹೆಚ್ಚು ಅರ್ಜಿಗಳು ಬಂದಿದ್ದೇವೆ. ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ವಿಳಂಬ ಮಾಡದಂತೆ ಸೂಚನೆಯಲ್ಲಿ ಕೇಳಿದ್ದಾರೆ.
ಒಂದು ಜಿಲ್ಲೆ ಇನ್ನೊಂದು ಜಿಲ್ಲೆಯ ಉತ್ಪನ್ನಗಳನ್ನು ಹಾಗೂ ಇತರೆ ಕರಕುಶಲ ವಸ್ತುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಯುನಿಟಿ ಮಾಲ್ ಅನ್ನು ಕೇಂದ್ರ ಸರ್ಕಾರವು 197 ಕೋಟಿ ಗಳ ಬಡ್ಡಿ ರಹಿತ ಸಾಲದ ನೆರವಿನೊಂದಿಗೆ ನಿರ್ಮಿಸಲು ಮೈಸೂರು ವಸ್ತು ಪ್ರಾಧಿಕಾರದಲ್ಲಿ 6.5 ಎಕರೆ ಜಮೀನು ಪಡೆದು ಯುನಿಟಿ ಮಾಲ್ ಸ್ಥಾಪನೆ ಮಾಡಲಾಗುವುದು.
ಕರ್ನಾಟಕ ಸರ್ಕಾರ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ 2024ನ್ನು ಅನುಮೋದನೆ ನೀಡಲಾಗುತ್ತಿದೆ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧಾನ 2024ಕ್ಕೆ ಅನುಮೋದನೆಯನ್ನು ಮುಂದಿನ ಅಧಿವೇಶನಗಳಲ್ಲಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕರ್ನಾಟಕದಲ್ಲಿರುವ 25000 ಸೊಸೈಟಿಗಳ ಮೀಸಲಾತಿ ಸಾಮಾಜಿಕ ನ್ಯಾಯ ಸಿಗಲಿದೆ ಈ ತಿದ್ದುಪಡಿಯಲ್ಲಿ ಸಹಕಾರ ಸಂಘಗಳ ಚುನಾವಣೆ ಹಾಗೂ ನಾಮ ನಿರ್ದೇಶನಗಳಲ್ಲಿ ಮೀಸಲಾತಿ ನೀಡಲು ವಿಧೇಯಕಕ್ಕೆ ತಿದ್ದುಪಡಿ ತರಲು ಕ್ಯಾಬಿನೆಟ್ ತೀರ್ಮಾನಿಸಿದೆ.
ರಾಮನಗರ ತಾಲೂಕು ಬಿಡದಿ ಹೋಬಳಿಯ ಬಿಡದಿಯಲ್ಲಿ ಮಹಿಳೆಯರಿಗಾಗಿ ಪ್ರಾದೇಶಿಕ ವಾಹನ ಚಾಲನ ತರಬೇತಿ ಕೇಂದ್ರವನ್ನು ಅವೇಕ್ ಸಂಸ್ಥೆಯನ್ನು ರಾಜಾಜಿನಗರ ಬೆಂಗಳೂರು ಮತ್ತು ಸರ್ಕಾರಿ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ 10.5 ಕೋಟಿ ಅಂದಾಜು ಮೊತ್ತವನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ಸಂಪುಟವು ಒಪ್ಪಿಗೆ ನೀಡಿದೆ.
202324ನೇ ಸಾಲಿನ ಸಮಗ್ರ ಶಿಶು ಯೋಜನೆ ಅಡಿಯಲ್ಲಿ ಮೇಲ್ವಿಚಾರಕಿಯರ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ 75,938 ಸ್ಮಾರ್ಟ್ ಫೋನ್ ಗಳನ್ನು 89.61 ಕೋಟಿ ವೆಚ್ಚದಲ್ಲಿ ಖರೀದಿಸಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಕೆ ಎಸ್ ಸೂಪರ್ ಟೈಮ್ ಸ್ಕೇಲ್ ಮತ್ತು ಕೆ ಎಸ್ ಆಯ್ಕೆ ಶ್ರೇಣಿಯನ್ನು ಭರ್ತಿಗೆ ನಿಗದಿಪಡಿಸಿರುವ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಕಡಿಮೆಗೊಳಿಸುವ ಸಂಬಂಧ ಕರ್ನಾಟಕ ಆಡಳಿತ ಸೇವೆಗಳು ನೇಮಕಾತಿ ತಿದ್ದುಪಡಿ ನಿಯಮಗಳನ್ನು 2024ರ ಕ್ಯಾಬಿನೆಟ್ ಅನುಮೋದನೆ ದೊರೆತಿದೆ.
ವಿಶೇಷ ವಿವಾಹ ಕರ್ನಾಟಕ ತಿದ್ದುಪಡೆಯ ನಿಯಮಗಳು 2024 ರ ಅನುಮೋದನೆ ಈ ಮೇಲ್ ಮೂಲಕವೂ ವಿವಾಹ ನೋಂದಣಿ ಮಾಡಿಕೊಳ್ಳಬಹುದು.
202324ನೇ ಸಾಲಿನ ಎಸ್. ಸಿ .ಪಿ. ಎಸ್ . ಪಿ ಕ್ರಿಯಾಯೋಜನೆಯ ಅಡಿಯಲ್ಲಿ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕೈಗಾರಿಕೆಗಳ ತರಬೇತಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ – ಎಸ್ಟಿ ವಿದ್ಯಾರ್ಥಿಗಳಿಗೆ 45 ಪಾಯಿಂಟ್ 28 ಕೋಟಿ ವೆಚ್ಚದಲ್ಲಿ ಟೂಲ್ ಕಿಟ್ಟು ಗಳನ್ನು ಖರೀದಿಸಿ ವಿತರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದರಿಂದ ಸುಮಾರು 34,178 ವಿದ್ಯಾರ್ಥಿಗಳಿಗೆ ಟೋಲ್ ಕಿಟ್ಟು ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತಿಳಿಸಿದ್ದಾರೆ.