ಮೆಜೆಸ್ಟಿಕ್ ನಿಂದ ಪೀಣ್ಯ ಕಡೆಗೆ ಹೊರಟಿದ್ದ ಬಿಎಂಟಿಸಿ ಬಸ್ ನಲ್ಲಿ ಇಬ್ಬರು ಮಹಿಳೆಯರ ನಡುವೆ ಕಿಟಕಿ ತೆರೆಯುವ – ಮುಚ್ಚುವ ವಿಷಯದಲ್ಲಿ ರಂಪಾಟ ಶುರುವಾಗಿ ಈ ಜಗಳವೂ ತಾರಕಕ್ಕೇರಿದೆ ಈ ಮಹಿಳೆಯರು ಚಪ್ಪಲಿಯಿಂದ ಹೊಡೆದಾಡುವ ದೃಶ್ಯ ಬಸ್ಸಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಂಚಲನ ಮೂಡಿಸಿದೆ. ಬಸ್ಸಿನಲ್ಲಿದ್ದ ಕಂಡಕ್ಟರ್ ಇಬ್ಬರ ಜಗಳವನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ ಅವರ ಜಗಳವನ್ನು ನಿಯಂತ್ರಿಸಲು ಹೋಗಲಿಲ್ಲ. ಇವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡ ಡ್ರೈವರ್ ತನ್ನ ಪಾಡಿಗೆ ತಾನು ಬಸ್ಸನ್ನು ಓಡಿಸುತ್ತಿದ್ದನು. ಇದು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬಿಟ್ಟಿದೆ ಎನ್ನುವ ಹಾಗೆ ಎಲ್ಲರೂ ಇರುತ್ತಾರೆ.