ಶಿವಮೊಗ್ಗ : ಕರ್ನಾಟಕ ಶಿಕ್ಷಣ ಇಲಾಖೆ ಕಳೆದ ದಿನಗಳ ಹಿಂದೆ ಅಷ್ಟೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಿತ್ತು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸೂಲಿಬೆಲೆ ಅವರು Karnataka state 10th standard exam time table received all the exam in morning session but first Friday why ? Ho time for namaz ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಕುರಿತಂತೆ ಎಲ್ಲೆಡೆಯೋ ಅಸಮಾಧಾನ ವ್ಯಕ್ತಪಡಿಸಿದ್ದು. ಪೋಸ್ಟ್ ನಲ್ಲಿ ಅನ್ಯ ಧರ್ಮವನ್ನು ಹೀಯಾಳಿಸಿವಂತೆ ಮತ್ತು ಮುಸಲ್ಮಾನರ ಮೇಲೆ ಕೆಟ್ಟ ಭಾವನೆ ಬರುವಂತೆ ಬರೆದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸರ್ಕಾರ ಒಂದು ಧರ್ಮದ ಪರವಿರದೆ ಎಂಬ ಭಾವನೆ ಬರುವಂತೆ ಮಾಡಿ ರಾಜ್ಯದಲ್ಲಿ ಅಶಾಂತಿ ಕೋಮುಗಲಭೆ ಉಂಟುಮಾಡುವುದರಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ವಿಜಯಕುಮಾರ್ ಎಸ್ಎನ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಶಿವಮೊಗ್ಗ ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ
ಚಕ್ರವರ್ತಿ ಸೂಲಿಬೆಲೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪೋಸ್ಟರ್ ವಿಚಾರವಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸದಸ್ಯರು ದೂರು ನೀಡಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 1860 ರ 505 / 1 ಬಿ 505 / 1ಸಿ 505 / 2 ಪ್ರಕರಣದಲ್ಲಿ ದೂರು ದಾಖಲೆ ಮಾಡಲಾಗಿದೆ