Breaking
Mon. Dec 23rd, 2024

ವಿದ್ಯಾರ್ಥಿಗಳಿಗೆ ಸರ್ಕಾರದ ಹೊಸ ಯೋಜನೆ APAAR ID

ಬೆಂಗಳೂರು :  ಒನ್ ನೇಷನ್, ಒನ್ ಸ್ಟೂಡೆಂಟ್ ಐಡಿ ಎಂಬ ಏಕೀಕೃತ ವಿದ್ಯಾರ್ಥಿ ಗುರುತಿನ ವ್ಯವಸ್ಥೆಯನ್ನು ಸ್ಥಾಪಿಸುವುದು ಎ ಪಿ ಎ ಎ ಆರ್ ವಿ ಗುರಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿದ್ದು, ಎಲ್ಲಾ ಶಾಲಾ ಕಾಲೇಜು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ನಲ್ಲಿ ನೊಂದಾಯಿಸಿ ಕೊಳ್ಳಬೇಕಾಗುತ್ತದೆ.

ಹೊಸ ನಿಯಮದ ಪ್ರಕಾರ ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಪ್ರವೇಶಕ್ಕೆ ಎ.ಬಿ.ಸಿ ಐಡಿ ಹೊಂದಿರುವುದು ಕಡ್ಡಾಯವಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆಯ ಕೆ ಸಂಜಯ್ ಮೂರ್ತಿ ಮತ್ತು ಎಂಡಿ – ಸಿಇಓ, ಸಿ .ಎಸ್ .ಸಿ – ಎಸ್ ಪಿ ವಿ ಜಂಟಿಯಾಗಿ ಸಾಮಾನ್ಯ ಸೇವೆಯ ಮೂಲಕ ಸ್ವಯಂ ಚಾಲಿತ ಶಾಶ್ವತ ಶೈಕ್ಷಣಿಕ ಕಥೆ ನೋಂದಣಿಯನ್ನು ಪ್ರಾರಂಭಿಸಿದರು ಎಂದು ಶಿಕ್ಷಣ ಸಚಿವಾಲಯ ಫೆಬ್ರವರಿ 7ರಂದು ಟ್ವೀಟ್ ಮಾಡಿದೆ.

ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣದ ಕಾರ್ಯದರ್ಶಿ ಕೆ ಸಂಜಯ್ ಮೂರ್ತಿ ಮುಂದಿನ 1.5 ವರ್ಷಗಳಲ್ಲಿ ಸಮರ್ಥ ಅಡಿಯಲ್ಲಿ ಕನಿಷ್ಠ 10,000 ಸಂಸ್ಥೆಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರವು ಸಮರ್ಥ, ಸ್ವಯಂ ಮತ್ತು ದೀಕ್ಷಾ ಮುಂತಾದ ತಂತ್ರಜ್ಞಾನ ವೇದಿಕೆಗಳನ್ನು ಬಳಸುವುದನ್ನು ಹೇಳಿದರು.

“APAAR ID” ಜೀವನಪರ್ಯಂತ ವಿದ್ಯಾರ್ಥಿಗಳೊಂದಿಗೆ ಇರುತ್ತದೆ ಪ್ರಮಾಣಪತ್ರಗಳ ಅಗತ್ಯವಿಲ್ಲದೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ  ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.

ಈ ಡಿಜಿಟಲ್ ಕ್ರೆಡಿಟ್ ರೆಪೊಸಿಟರಿಯಲ್ಲಿ, ವಿದ್ಯಾರ್ಥಿಗಳ ಅಂಕಗಳು ಮತ್ತು ವೈಯಕ್ತಿಕ ವಿವರವನ್ನು ಸಂಗ್ರಹಿಸಲಾಗುತ್ತದೆ ಈ ಗುರುತಿನ ಸಹಾಯದಿಂದ ವಿದ್ಯಾರ್ಥಿಗಳು ಪದವಿ ಪೂರ್ವ ಮತ್ತು ಸ್ನಾತಕೋತ್ತರ ಅಧ್ಯಯನಕ್ಕಾಗಿ ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು.

Related Post

Leave a Reply

Your email address will not be published. Required fields are marked *