ವಾಹನ ಸವಾರರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸ್ ವಿಭಾಗ ವಿಶೇಷ ಕಾರ್ಯಾಚರಣೆ ನಡೆಸಿದ್ದು ನಿಯಮ ಉಲ್ಲಂಘಿಸಿದವರಿಗೆ ದಂಡದ ಬಿಸಿ ಮುಟ್ಟಿಸಿದೆ.
ಕಳೆದ ಹತ್ತು ದಿನಗಳಿಂದ ನಗರಾದ್ಯಂತ ಫುಡ್ ಪಾತ್ ರೈಡಿಂಗ್, ಅಪ್ರಾಪ್ತರ ವಾಹನ ಚಾಲನೆ, ನೀರಿನ ಟ್ಯಾಂಕರ್, ನಂಬರ್ ಪ್ಲೇಟ್ ಮರೆ ಮಾಡುತ್ತಿರುವ ವಾಹನ ಸವಾರರನ್ನು ಪತ್ತೆ ಹಚ್ಚಿ ಸಂಚಾರ ಪೊಲೀಸ್ ಕೇಸ್ ದಾಖಲಿಸಿದ್ದಾರೆ.
ನಿಯಮ ಉಲ್ಲಂಘಿಸಿದ ಸವಾರರ ಬಳಿ ಸ್ಥಳದಲ್ಲಿಯೇ ದಂಡ ವಸೂಲಿ ಮಾಡುತ್ತಿದ್ದಾರೆ ಬೈಕ್ ಸೇರಿದಂತೆ ಇತರೆ ವಾಹನಗಳಿಗೆ ಕರ್ಕಶ ಹಾರ್ನ್ ಅಳವಡಿಸಿಕೊಂಡು ಪ್ರಯಾಣದ ವೇಳೆ ಸದಾ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದವರ ವಿರುದ್ಧ ಒಂದೇ ದಿನ 483 ಕೇಸ್ ದಾಖಲಾಗಿದೆ. ಬೈಕ್ ಗಳ ಸೈಲೆನ್ಸರ್ಗಳನ್ನು ಮಾರ್ಪಾಡು ಮಾಡಿಕೊಂಡಿರುವ ಸವಾರರನ್ನು ಪತ್ತೆ ಹಚ್ಚಿ 137 ಕೇಸ್ ದಾಖಲಿಸಿ ದಂಡ ಕಟ್ಟಿಸಿದ್ದಾರೆ.
ಎಚ್ಚರಿಕೆ ಬಳಿಕವೂ ಉಲ್ಲಂಘನೆ : ನಿಯಮ ಉಲ್ಲಂಘಿಸಿದವರ ವಿರುದ್ಧ ವಿಶೇಷ ಪೊಲೀಸ್ ಕಾರ್ಯಾಚರಣೆ ಅನಿವಾರ್ಯವಾಯಿತು ಈ ಈ ನಿಟ್ಟಿನಲ್ಲಿ ಆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಹಾಗೂ ಸಾಯಂಕಾಲದ ಪೀಕ್ ಅವರ್ ಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.