ಬೆಂಗಳೂರು : 2019ರ ಏಪ್ರಿಲ್ ಒಂದಕ್ಕಿಂತ ಮೊದಲು ನೀವು ವಾಹನ ಖರೀದಿ ಮಾಡಿದ್ದಾರೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಕಿಸಬೇಕು. ಯಾಕೆಂದರೆ 2019ರ ಏಪ್ರಿಲ್ ನಂತರ ಖರೀದಿಸಿದ ಎಲ್ಲಾ ವಾಹನಗಳಿಗೆ ವಿಲೇವಾರಿ ಮಾಡುವ ಒತ್ತಿನಲ್ಲೇ ಡೀಲರ್ಗಳು ಹಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿ ಕೊಡುತ್ತಿದ್ದಾರೆ. ಇದಕ್ಕೂ ಮುನ್ನ ಖರೀದಿ ಮಾಡಿದ ವಾಹನಗಳಿಗೆ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಇರುವುದಿಲ್ಲ.
ನಿಮ್ಮ ಗಾಡಿಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಲ್ಲ ಅಂತ ಈಗಾಗಲೇ ಪೊಲೀಸರು ಮತ್ತು ಆರ್ ಟಿ ಓ ಅಧಿಕಾರಿಗಳು ಗಾಡಿಗಳನ್ನು ಹಿಡಿಯುತ್ತಾರೆ. ಇದರ ಫೈನ್ ಈಗಾಗಲೇ ನಿಗದಿಪಡಿಸಿದ್ದು ಮೊದಲನೇ ಬಾರಿಗೆ ವಾಹನವನ್ನು ಹಿಡಿದರೆ ರೂ.1000 ತಂಡ ಮತ್ತು ಎರಡನೇ ಬಾರಿಗೆ ಹೇಳಿದರೆ ರೂ. 2000 ತಂಡ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು. ಗಾಡಿ ಮಾಲೀಕರು ತಪ್ಪದೇ ಫೆಬ್ರವರಿ 17 ರ ಒಳಗೆ ಈ ದಂಡದಿಂದ ದೂರ ಇರುವಂತೆ ತಮ್ಮ ವಾಹನಗಳಿಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸಬೇಕು.
ಸಾರ್ವಜನಿಕರು ಈ ನಂಬರ್ ಪ್ಲೇಟ್ ಹಾಕಿಸದೇ ವಾಹನವನ್ನು ರೋಡಿಗೆ ಇಳಿಸಿದರೆ ದಂಡ ಕಟ್ಟಿಟ್ಟ ಬುತ್ತಿ ಸಾರ್ವಜನಿಕರು ಈ ನಂಬರ್ ಪ್ಲೇಟ್ ಹಾಕಿಸುವುದರಿಂದ ಸೈಬರ್ ಕ್ರಿಮಿನಲ್ ಗಳ ಬಲೆಗೆ ಬೀಳೋ ಚಾನ್ಸ್ ಇದೆ.
ಈಗಾಗಲೇ ಇಂತಹ ಕೇಸ್ಗಳು ಬೆಂಗಳೂರಿನಲ್ಲಿ ನಡೆದಿರೋ ಕಾರಣ ಸ್ವಲ್ಪ ಹುಷಾರಾಗಿರಿ.
ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸೋಕೆ ಪಾಲನೆ ಮಾಡಬೇಕಾದ ಪ್ರಕ್ರಿಯೆಗಳನ್ನು ಈ ಹಂತದಲ್ಲಿ ವಿವರಿಸಲಾಗಿದೆ. ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ https://transport. Karnataka.gov.in/ ಗೆ ಲಾಗಿನ್ ಆಗಿ ಅಥವಾ ಸೊಸೈಟಿ ಆಫ್ ಇಂಡಿಯಾ ಆಟೋಮೊಬೈಲ್ಸ್ ಮ್ಯಾನುಫ್ಯಾಕ್ಚರ್ಸ ಸಂಘಟನೆಯ ವೆಬ್ಸೈಟ್ಗೆ ಬೇಕಾದರೂ ಲಾಗಿನ್ ಆಗಬಹುದು ಈ ವೆಬ್ಸೈಟ್ನ ವಿಳಾಸ https://www.siam.in/ ಈ ಎರಡು ವೆಬ್ಸೈಟ್ಗಳ ಪೈಕಿ ಯಾವುದಕ್ಕೆ ಭೇಟಿ ನೀಡಿದರು ಕೂಡ ಬುಕ್ ಎಚ್ ಎಸ್ ಆರ್ ಪಿ ಅನ್ನು ಆಯ್ಕೆ ಕಾಣ ಸಿಗುತ್ತೆ.
ಎಚ್ಎಸ್ಆರ್‌ಪಿ ಪ್ಲೇಟ್ ಅಳವಡಿಕೆಗೆ ನಿಗದಿತ ಶುಲ್ಕವನ್ನು ತಿಳಿಸಲಾಗಿದೆ ಕಾರಿಗೆ 650 ರೂಪಾಯಿಯಿಂದ 850ವರೆಗೆ ಫೀಸ್ ಕೊಡಬೇಕಾಗುತ್ತದೆ. ಇನ್ನೂ ಬೈಕ್ , ಸ್ಕೂಟರ್ಗಳಿಗೆ 400 ರೂಪಾಯಿಯಿಂದ 600 ರೂಪಾಯಿ ಆಗುತ್ತದೆ. ಎಚ್ ಎಸ್ ಆರ್ ಪಿ ಪ್ಲೇಟ್ ಅಳವಡಿಕೆಗೆ ನಗದು ರೂಪದಲ್ಲಿ ಹಣ ಪಾವತಿ ಆಯ್ಕೆ ಇರುವುದಿಲ್ಲ. ಇನ್ನು ಆನ್ಲೈನ್ ನಲ್ಲಿ ಹಣ ಪಾವತಿ ಬಳಕೆ ನಿಮ್ಮ ಮೊಬೈಲ್ ನಲ್ಲಿ ಓಟಿಪಿ ಬರುತ್ತೆ ಇದಾದ ಬಳಿಕ ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಚ್ ಎಸ್ ಆರ್ ಪಿ ಪ್ಲೇಟ್ ಅಳವಡಿಸುವ ದಿನಾಂಕ ಸಮಯ ತಿಳಿಸಿಕೊಡುತ್ತದೆ. ನಿಮ್ಮ ಮನೆ ಅಥವಾ ಆಫೀಸಿಗೆ ಬಳಿ ಬಂದು ಎಚ್ಎಸ್ಆರ್ ಪಿ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬಹುದು
ಸಾರ್ವಜನಿಕರು ತಮ್ಮ ವಾಹನಗಳಿಗೆ ತಪ್ಪದೇ ಎಚ್ ಎಸ್ ಆರ್ ಪಿ ಪ್ಲೇಟ್ ಹಾಕಿಸಿ ಸರ್ಕಾರ ವಿಧಿಸಿರುವ ದಂಡದಿಂದ ದೂರ ಇರಿ ಎಂದು ಆವಿಷ್ಕಾರ್ ನ್ಯೂಸ್ ಮನವಿ ಮಾಡಿಕೊಳ್ಳುತ್ತದೆ. ಸರ್ಕಾರವು ಈಗಾಗಲೇ ಫೆಬ್ರವರಿ 17ರ ವರೆಗೆ ಗಡುವು ನೀಡಿತ್ತು. ವಾಹನ ಮಾಲೀಕರು ತಮ್ಮ ವಾಹನಗಳಿಗೆ ಹಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಮೊದಲನೇ ಬಾರಿಗೆ 1000 ರೂಪಾಯಿ ತಂಡ ಮತ್ತು ಎರಡನೇ ಬಾರಿಗೆ ರೂ. 2000 ತಂಡ ವಿಧಿಸಲು ಮುಂದಾಗಿದೆ ಸರ್ಕಾರ ಮತ್ತು ಆರ್ ಟಿ ಓ ಇಲಾಖೆಗಳು ಒಟ್ಟಿಗೆ ಸೇರಿ ದಂಡ ವಿಧಿಸಲು ಮುಂದಾಗಿದ್ದಾರೆ.