ಹಿರಿಯೂರು : ಚಿತ್ರದುರ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಕಂಟೈನರ್ ಲಾರಿ ಟೈಯರ್ ಬ್ಲಾಸ್ಟ್ ಆಗಿ ಆಕಸ್ಮಿಕವಾಗಿ ಬೆಂಕಿ ಒತ್ತಿ ಉರಿದ ಘಟನೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದೆ.
ಈ ಘಟನೆ ನಡೆದ ಸ್ಥಳಕ್ಕೆ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಮಾಹಿತಿ ತಿಳಿದು ಬಂದಿಲ್ಲ. ಇದರಲ್ಲಿರುವ ಸರಕು ಸಾಗಾಣಿಕೆ ವಸ್ತುಗಳು ಏನಿದೆ ? ಎಂಬುದು ಸಹ ತಿಳಿದು ಬರಬೇಕಿದೆ.
ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ತನಿಖೆಯ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.