Breaking
Mon. Dec 23rd, 2024

ಕೆ ಸಿ ವ್ಯಾಲಿ, ಹೆಚ್ ಎನ್ ವ್ಯಾಲಿ ಯೋಜನೆಗಳ ಶುದ್ಧೀಕರಣಕ್ಕಾಗಿ ರಾಜ್ಯಪಾಲರಿಗೆ ಮನವಿ.

ಬೆಂಗಳೂರು : ಸಿದ್ದರಾಮಯ್ಯನವರ ಸರ್ಕಾರವು ಬಜೆಟ್ ನಲ್ಲಿ ಮಂಡಿಸಿರುವ ಹಿನ್ನೆಲೆಯಲ್ಲಿ ಬಯಲು ಸೀಮೆ ಬರಬೇಡಿ ತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸುರಕ್ಷಿತ ಕುಡಿಯುವ ನೀರು, ನೀರಾವರಿ ಸೌಲಭ್ಯ, ಒದಗಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಈ ಸಂಬಂಧದ ವಿರುದ್ಧ ದೂರು ನೀಡಲು ಕೆ.ಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ಮೂರನೇ ಹಂತದಲ್ಲಿ ಶುದ್ಧೀಕರಣಕ್ಕಾಗಿ ಶಾಶ್ವತ ನೀರಿನ ಹೋರಾಟ ಸಮಿತಿ ರಾಜ್ಯಪಾಲರನ್ನು ಭೇಟಿ ನೀಡಿ ದೂರು ಸಲ್ಲಿಸಿತು.

ಇದರಿಂದ ಅಂತರ್ಜಾಲ ಪಾತಾಳಕ್ಕೆ ಕುಸಿಯುತ್ತಿದೆ, ಮಾತ್ರವಲ್ಲದೆ ಆಳದಲ್ಲಿ ಸಿಗುವ ನೀರು ಕುಡಿಯಲು ಮಾತ್ರವಲ್ಲದೆ ಕೃಷಿಗೂ  ಆಯೋಗ್ಯವಾಗಿದೆ‌. ಕುಡಿಯುವ ನೀರು ಕೊಳವೆಬಾವಿ ನೀರಿನಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್ ಗಳ ಜೊತೆಗೆ ಯುರೇನಿಯಂ ಮತ್ತು ಹರ್ಸನಿಕ್ ಕಣಗಳು ಪತ್ತೆಯಾಗಿರುವುದು ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳು ಸಂಶೋಧನೆಯಲ್ಲಿ ದೃಢಪಟ್ಟಿದೆ. ಇದು ಕುಡಿಯುವ ನೀರು ಹಾಗೂ ಕೃಷಿ ಬೆಳೆಗಳನ್ನು ವಿಷಪೂರಿತಗೊಳಿಸುವುದರ ಜೊತೆಗೆ ಜನರು ಮತ್ತು ಜಾನುವಾರುಗಳನ್ನು ಮಾರಣಾಂತಿಕ ಕಾಯಿಲೆಗೆ ದೂಡುತ್ತಿದೆ.

ಆದರೆ ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಪಾಲಿಸಿಲ್ಲ 2013ರಲ್ಲಿ ಕೇಂದ್ರ ಸರ್ಕಾರ ನಗರ ಅಭಿವೃದ್ಧಿ ಸಚಿವಾಲಯ ಕೇಂದ್ರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಂಜಿನಿಯರಿಂಗ್ ಸಂಸ್ಥೆ, ನವದೆಹಲಿ ಮತ್ತು ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ ಜಂಟಿಯಾಗಿ ರೂಪಿಸಿದ ಕೊಳಚೆ ಮತ್ತು ಒಳಚರಂಡಿ ಸಂಸ್ಕರಣ ವ್ಯವಸ್ಥೆಗಳ ಕೈಪಿಡಿಯನ್ನು ಹೊರ ತಂದಿದೆ ಇದು ಎಲ್ಲಾ ರಾಜ್ಯಗಳು ಸರ್ಕಾರಗಳು ಒಪ್ಪಿಕೊಂಡಿವೆ.

ಈ ಹಿನ್ನಲೆಯಲ್ಲಿ ಬರಪೀಡಿತ ಜಿಲ್ಲೆಗಳನ್ನು ಉಳಿಸಲು ಆದ್ಯತೆಯ ಆಧಾರದ ಮೇಲೆ ತೃತೀಯ ಹಂತದ ಸಂಸ್ಕರಣಾ ಸೌಲಭ್ಯಗಳನ್ನು ಎಸ್‌.ಟಿ.ಪಿ ಗಳನ್ನು ಉನ್ನತೀಕರಣಗೊಳಿಸಲು ಅಗತ್ಯವಾದ ಹಣ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ನಿರ್ದೇಶನ ನೀಡಲು ನಿಮ್ಮ ಸಮಯೋಜಿತ ಮಧ್ಯಸ್ಥಿಕೆಯನ್ನು  ನಾವು ಬಯಸುತ್ತೇವೆ ಎಂದು ಹೇಳಿದರು.

Related Post

Leave a Reply

Your email address will not be published. Required fields are marked *