ಹಿರಿಯೂರು : ನಗರದ ದುರ್ಗೆ ಗುಡಿ ಬೀದಿಯಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ದೇವಾಲಯದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಇಂದು ಮತ್ತು ನಾಳೆ 17ನೇ ವರ್ಷದ ದಂಡಿ ಉತ್ಸವ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಏಕೆ ಮಂಜು ರಾವ್ ಬೇಂದ್ರೆ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಭಿಷೇಕ ಮಹಾಮಂಗಳಾರತಿ ಹಾಗೂ ಭಜನೆ ಕಾರ್ಯಕ್ರಮಗಳು ಇರುತ್ತವೆ. 12 ಗಂಟೆಯಿಂದ ಕಲ್ಯಾಣೋತ್ಸವ ಸಂಜೆ ನಾಲ್ಕು ಗಂಟೆಯಿಂದ ಪ್ರತಿಷ್ಠಾಪನೆ ಪ್ರವಚನ ಕಾರ್ಯಕ್ರಮಗಳು ನಡೆಯಲಿದೆ 11ರ ಭಾನುವಾರ ಬೆಳಗ್ಗೆ 5:30ಕ್ಕೆ ಕಾಕಡಾರತಿ ನಂತರ ಶ್ರೀ ಜ್ಞಾನೇಶ್ವರಿ ಪಾರಾಯಣ ವಿಠಲ ರುಕ್ಮಿಣಿ ದೇವರ ಉತ್ಸವದ ಮೂರ್ತಿ ಅಲಂಕಾರ ಭವ್ಯ ರಥದಲ್ಲಿ ರಾಜಾಭೀದಿ ಉತ್ಸವ ಏರ್ಪಡಿಸಲಾಗಿದೆ. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ.