ಮೈಸೂರು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಾಂಸ್ಕೃತಿಕ ನಗರಿ ಮೈಸೂರಿಗೆ ಫೆಬ್ರವರಿ 11ರಂದು ಆಗಮಿಸುವ ಹಿನ್ನೆಲೆಯಲ್ಲಿ ಟೈಟ್ ಮಾಡಲಿದೆ. ಅದರಲ್ಲೂ ವಿಶೇಷವಾಗಿ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರ ನಿರ್ಬಂಧ ಹೇರಲಾಗಿದೆ ಇದು ಕೆಲ ಸುರಕ್ಷಿತ ಕ್ರಮ ಕೈಗೊಳ್ಳಲು ಪೊಲೀಸ್ ಮೂಲಗಳು ತಿಳಿಸಿವೆ.
ಅಮಿತ್ ಶಾ ಶನಿವಾರ ರಾತ್ರಿ ವಿಶೇಷ ವಿಮಾನ ಮೂಲಕ ಮೈಸೂರು ಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡ ದೇವತೆ ಚಾಮುಂಡಿ ದರ್ಶನ ಪಡೆಯಲಿದ್ದಾರೆ ಈ ಹಿನ್ನಲೆಯಲ್ಲಿ ಸುರಕ್ಷಿತ ಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಕೆಲಕಾಲ ನಿರ್ಬಂಧ ವಿಧಿಸಲಾಗಿದೆ. ಪೊಲೀಸರು ಕೈಗೊಂಡಿರುವ ಭದ್ರತಾ ಹಿತದೃಷ್ಟಿಯಿಂದ ಸಾರ್ವಜನಿಕರು ಬೆಳಗ್ಗೆ 10 ರಿಂದ 11:30ವರೆಗೆ ಬೆಟ್ಟಕ್ಕೆ ತೆರಳಲು ನಿಷೇಧಿಸಿದೆ. ಭಾನುವಾರ ಬೆಳಗ್ಗೆ 11:30 ನಂತರ ದೇವಿ ದರ್ಶನಕ್ಕೆ ತೆರವು ಗೊಳಿಸುವುದು ಸೂಕ್ತವಾಗಿದೆ ಕಮಿಷನರ್ ರಮೇಶ್ ಬಾನೋತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.