ಹೆಸರೇ ಹೇಳುವಂತೆ ಒಂದು ಸರಳ ಪ್ರೇಮಕಥೆ ಸಿನಿಮಾ ಸರಳ, ಸುಂದರವಾದ ಪ್ರೇಮಕಥೆ ಸಿನಿಮಾದಲ್ಲಿ ಸಾಕಷ್ಟು ಪ್ರಶಂಸೆ ಹಾಗೂ ಹಾಸ್ಯ ಅಡಕವಾಗಿದೆ ಗೆಳೆಯರು ಕುಟುಂಬದವರು ಸೇರಿ ಖುಷಿಯಿಂದ ವೀಕ್ಷಿಸಬಹುದು ಸಿಂಪಲ್ ಸುನಿ ನಿರ್ಮಾಣ ಮಾಡಿರುವ ಸಿನಿಮಾ ನೋಡಲು ಕುಟುಂಬದವರು ಬರುತ್ತಿದ್ದು ಚಿತ್ರಮಂದಿರಗಳು ತುಂಬಿವೆ ಕನ್ನಡದ ಸಿನಿಮಾ ಒಂದಕ್ಕೆ ಈ ಮೆಚ್ಚುಗೆ ಕುಟುಂಬಗಳು ಬರುತ್ತಿರುವುದು ಬಹಳ ಖುಷಿ ವಿಚಾರ ಎಂದಿದ್ದಾರೆ.
ವಿನಯ್ ನೀವು ಹಾಸ್ಯ, ಬಾವುಕ ಸನ್ನಿವೇಶದಲ್ಲಿ ಎಲ್ಲವನ್ನು ಅದ್ಭುತವಾಗಿ ನಿರ್ವಹಿಸಿದ್ದೀರಿ ನಿಮ್ಮ ಈವರೆಗಿನ ಪಯಣ ಅದ್ಭುತವಾದದ್ದು ಮೊದಲ ಸಿನಿಮಾದಿಂದ ಇಷ್ಟು ದೂರ ನೀವು ಬಂದಿದ್ದೀರಿ ನೀವು ಒಂದು ಪರಂಪರೆಯನ್ನು ಪ್ರತಿನಿಧಿಸುತ್ತೀರಾ. ಆ ಪರಂಪರೆಯ ಗೌರವವನ್ನು ಚೆನ್ನಾಗಿ ಕಾಪಾಡುತ್ತಿದ್ದೀರಿ ನಿಮ್ಮ ಪಯಣ ನನಗೆ ತುಂಬಾ ಹೆಮ್ಮೆ ಇದೆ ಇದನ್ನು ಬರೆಯುತ್ತಾ ನಾನು ಭಾವಕಳಾಗಿದ್ದೇನೆ ನಾನು ಪ್ರತಿ ಬಾರಿ ನಿಮ್ಮನ್ನು ಕರೆಯುವಂತೆ “ಐ ಲವ್ ಯು ವಿನೂ” ಅಷ್ಟೇ ಹೇಳುತ್ತೇನೆ ಎಂದಿದ್ದಾರೆ ರಮ್ಯಾ.
ನಟಿ ರಮ್ಯಾ ಒಂದು ಸರಳ ಪ್ರೇಮಕಥೆ ಸಿನಿಮಾ ವೀಕ್ಷಿಸಿದ್ದು ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಜೊತೆಗೆ ವಿನಯ್ ರಾಜ್ ರವರ ಬಗ್ಗೆ ಪ್ರೀತಿ ,ಭಾವದಿಂದ ಮಾತುಗಳನ್ನು ಆಡಿದ್ದಾರೆ.