ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಸಿ ರಘು ರಘು ಚಂದನ್ ರವರು ಒಂದು ಸಾವಿರ ಆಟಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಪ್ರಧಾನ ಮಂತ್ರಿ ಮತ್ತೆ ಮೋದಿ ಆಗಬೇಕೆಂದು ಬ್ಯಾನರ್ ಪ್ರಿಂಟ್ ಮಾಡಿಸಿ ಇಡೀ ಭಾರತದಾದ್ಯಂತ ಅವರ ಕೆಲಸವನ್ನು ಮಾಡುವ ವೈಖರಿ ಹಾಗೂ ಬಡ ಜನರಿಗೆ ತಲುಪಿರುವ ಯೋಜನೆಗಳನ್ನು ನಾವು ಮತ್ತೊಮ್ಮೆ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಸುದ್ದಿಗಾರರೊಂದಿಗೆ ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಮಾತನಾಡಿದರು
ಲೋಕಸಭಾ ವ್ಯಾಪ್ತಿಯಲ್ಲಿ ಆಯಾ ತಾಲೂಕಿನ ಆಟಗಳ ಸಂಖ್ಯೆ ಆಧರಿಸಿ ಆಟೋ ಗಳಿಗೆ ಪ್ರಚಾರ ಮಾಡುವ ಬ್ಯಾನರ್ ಗಳನ್ನು ಅಂಟಿಸಿ ಚಿತ್ರದುರ್ಗದಲ್ಲಿ ಪ್ರಾಯೋಗಿಕವಾಗಿ 150 ಆಟಗಳಿಗೆ ಚಾಲನೆ ನೀಡಿದರು ಬ್ಯಾನರ್ ಹಾಕಿಸುವಲ್ಲಿ ಯಾರಿಗೂ ಒತ್ತಡವಿಲ್ಲ ಸ್ವಯಂ ಪ್ರೇರಿತರಾಗಿ ಈ ಕೆಲಸಕ್ಕೆ ಒಪ್ಪಿದ್ದಾರೆ. ಆದರೆ ಈ ಬಾರಿ ಮೋದಿ ಅವರ ಕೆಲಸಗಳ ಬಗ್ಗೆ ಮನೆ ಮನೆ ಬಾಗಿಲಿಗೆ ಪ್ರಚಾರ ಮಾಡುವ ಮೂಲಕ ಮೋದಿಯ ಯೋಜನೆಗಳನ್ನು ತಿಳಿಸುವ ಉದ್ದೇಶವಾಗಿದೆ. ಇದು ಕಾನೂನುಬಾಹಿರ ಎಂದರೆ ಇದನ್ನು ತೆಗೆಯುತ್ತೇವೆ ಸಮಾಜಕ್ಕೆ ಬಿಜೆಪಿ ಕೊಡುಗೆ ಏನೆಂದು ತಿಳಿಸುತ್ತೇವೆ ಎಂದು ಹೇಳಿದರು.