ಬಾಲಿವುಡ್ ಖ್ಯಾತ ನಟ ಕಮ್ ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿ ಅವರು 1976 ರಿಂದ ಚಿತ್ರೋದ್ಯಮದಲ್ಲಿ ಕಾರ್ಯ ನಿರತರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠ ಗೌರವಗಳನ್ನು ಅವರು ಪಡೆದಿದ್ದಾರೆ.
ಡಿಸ್ಕೋ ಡ್ಯಾನ್ಸರ್ ,ಜಂಗ್, ಫ್ರೇಮ್ ಪ್ರತಿಜ್ಞಾ, ಪ್ಯಾರ್ ಜುಕ್ತಾ ನಹೀ ,ಮರ್ದ್ ಮುಂತಾದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಇವರಿಗೆ ತೀರ್ವ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 10 ರಂದು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ವರದಿಯಾಗಿತ್ತು.
ಇದೀಗ ನಟ ಮಿಥುನ್ ಚಕ್ರವರ್ತಿ ಅವರ ಹೆಲ್ತ್ ಬಗ್ಗೆ ಅಪ್ಡೇಟ್ ಹೊರಬಿದ್ದಿದೆ. ಅವರಿಗೆ ಆಗಿದ್ದು ಬ್ರೈನ್ ಸ್ಟ್ರೋಕ್ ಎಂಬ ವಿಚಾರ ತಿಳಿದು ಬಂದಿದೆ. ಮಿಥುನ್ ಈಗ ಐಸಿಯುನಿಂದ ಹೊರಬಂದು ಚೇತರಿಸಿಕೊಂಡಿದ್ದಾರೆ ಎಂದು ನಟಿ ದೇಬಶ್ರೀ ರಾಯ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸರಿಯಾದ ಸಮಯಕ್ಕೆ ಅಡ್ಮಿಟ್ ಮಾಡಿದ ಕಾರಣ ಚಿಂತಿಸುವ ಅಗತ್ಯವಿಲ್ಲ. ಶುಗರ್ ಮಟ್ಟ ಕಡಿಮೆ ಆಗಿದೆ. ಸದ್ಯ 73 ವರ್ಷ ವಯಸ್ಸಿನ ಮಿಥುನ್ ಆರೋಗ್ಯ ಚೇತರಿಕೆ ಕಂಡಿರುವ ವಿಚಾರ ಅಭಿಮಾನಿಗಳು ನೆರಳವಾಗಿದ್ದಾರೆ.