ಚಳ್ಳಕೆರೆ : ವಿಧಾನಸೌಧ ಕ್ಷೇತ್ರದ ಹ್ಯಾಟ್ರಿಕ್ ಖ್ಯಾತಿಯ ಶಾಸಕ ಟಿ ರಘುಮೂರ್ತಿ ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿಯ ಅಧ್ಯಕ್ಷರಾಗಿ ಜನವರಿ 26ರಂದು ಸರ್ಕಾರದಿಂದ ನೇಮಕಗೊಂಡಿದ್ದು , ಫೆಬ್ರವರಿ 12ರ ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಮಂಡಳಿಯ ಮುಖ್ಯ ಕಚೇರಿಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಶಾಸಕರ ಆಪ್ತ ವಲಯಗಳು ಇಲ್ಲಿ ತಿಳಿಯಬಹುದು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಮಿಟಿ ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಸಂದೇಶ ಕಳಿಸಿ ಫೆಬ್ರವರಿ 12ರ ಸೋಮವಾರ ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜೆ ಗೋವಿಂದಪ್ಪ ರಾಜ್ಯ ಆಹಾರ ಮಂಡಳಿ ಅಧ್ಯಕ್ಷರಾಗಿ, ಚಳ್ಳಕೆರೆ ಕ್ಷೇತ್ರದ ರಘುಮೂರ್ತಿ ರಾಜ್ಯ ಕೈಗಾರಿಕಾ ಮಂಡಳಿಯ ಅಧ್ಯಕ್ಷರಾಗಿ ಪದಗ್ರಹಣ ಮಾಡುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಘುಮೂರ್ತಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಿಸಿದ್ದು ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಧಿಕಾರ ಸ್ವೀಕರಿಸುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.