ಜಿಲ್ಲಾ ಆಸ್ಪತ್ರೆಗಳು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡದೆ ಹಾಗೂ ವೈದ್ಯರು ಅಲ್ಲಿನ ಸಿಬ್ಬಂದಿ ನಿರ್ಲಕ್ಷಯನ್ನುಂಟು ಮಾಡಿ ರೋಗಿಗಳಿಗೆ ಚಿಕಿತ್ಸೆಯನ್ನು ನೀಡದೆ ತಮ್ಮ ರೀಲ್ಸ್ ನ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಇದರಲ್ಲಿ ಸರ್ಕಾರವು ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಮುಂದೆ ಇಂತಹ ಕಾರ್ಯಕ್ರಮಗಳು ಮತ್ತೆ ಮರುಕಳಿಸದಂತೆ ಜಿಲ್ಲಾ ಆಸ್ಪತ್ರೆಗೆ ಮುನ್ನೆಚ್ಚರಿಕೆಯ ಕಠಿಣ ಕ್ರಮ ಕೈಗೊಳ್ಳಬೇಕು. ರೋಗಿಗಳಿಗೆ ಚಿಕಿತ್ಸೆ ನೀಡದೆ ವೈದ್ಯರು ತಮ್ಮ ಮನರಂಜನೆ ಕಾರ್ಯಕ್ರಮದಲ್ಲಿ ಕೈಗೊಂಡು ರೋಗಿಗಳ ಪ್ರಾಣ ಅಪಾಯ ಉಂಟಾದರೂ ಯಾರ ಗಮನಕ್ಕೂ ಬಾರದಂತೆ ಇರುತ್ತದೆ. ಆದ್ದರಿಂದ ರೀಲ್ಸ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯ ಪಡಿಸಿದ್ದಾರೆ.
ಬೆಂಗಳೂರು : ಕಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆ ಒಬ್ಬರಿಗೆ ಹಿರಿಯ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ ಕಿರಿಯ ವೈದ್ಯ ಡಾಕ್ಟರ್ ರಾಜು ಕಿಮ್ಸ್ ಆಸ್ಪತ್ರೆಯ ಫಾರ್ಮ್ ಕಾಗ್ನಸಿ ವಿಭಾಗದ ಮುಖ್ಯಸ್ಥೆ ಯಾಗಿರುವ ಮಹಿಳಾ ವೈದ್ಯೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಆರೋಪಿಸಲಾಗಿದ್ದು ಮಹಿಳಾ ವೈದ್ಯ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿತ್ರದುರ್ಗದ ಭರಮಸಾಗರ ಸಮುದಾಯದ ಆರೋಗ್ಯ ಕೇಂದ್ರದ ಶಸ್ತ್ರ ಚಿಕಿತ್ಸೆ ಘಟಕ ಬಳಸಿಕೊಂಡು ಫ್ರೀ ವೆಡ್ಡಿಂಗ್ ಸೂಟ್ ಮಾಡಿಸಿದ್ದ ಹೊರಗೆ ವೈದ್ಯ ಡಾಕ್ಟರ್ ಅಭಿಷೇಕ್ ಎಂಬಾತನನ್ನು ಕರ್ತವ್ಯದಿಂದ ವಜಾಗೊಳಿಸಿ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಆದೇಶಿಸಿದ್ದಾರೆ.
ಮತ್ತೊಂದೆಡೆ ಗದಗ್ ಜಿಲ್ಲಾಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಉಚ್ಚಾಟ ಮೆರೆದಿದ್ದ ಗದಗ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 38 ಮಂದಿ ವಿದ್ಯಾರ್ಥಿಗಳನ್ನು ಅಮಾನತ್ತು ಮಾಡಲಾಗಿದೆ.
ಜಿಲ್ಲಾ ಆಸ್ಪತ್ರೆಯನ್ನೇ ರೀಲ್ಸ್ ಸ್ಪಾಟ್ ಮಾಡಿಕೊಂಡಿದ್ದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದರು ಹಿನ್ನೆಲೆಯಲ್ಲಿ ಈಗಾಗಲೇ 38 ವಿದ್ಯಾರ್ಥಿಗಳು ಅಮಾನತು ಮಾಡಲಾಗಿದೆ ಅವರಿಗೆ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಜಿಲ್ಲಾ ವೈದ್ಯಕೀಯ ಮಂಡಳಿ ತಿಳಿಸಿದೆ ಎಂದರು.