ಹಳ್ಳಿಕಾರ್ ತಳಿ ರಾಸುಗಳ ಸೌಂದರ್ಯ ಸ್ಪರ್ಧೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಮಾರ್ಚ್ ಎಂಟು 2024 ರಂದು ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಹಳ್ಳಿಕಾರ್ ಹಸುಗಳ ಸೌಂದರ್ಯ ಪ್ರದರ್ಶನ ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಂಬರೀಶ್ ಅವರು ಮಾತನಾಡಿ ಮಹಾಶಿವರಾತ್ರಿ ಅಂಗವಾಗಿ ಹಳ್ಳಿಕಾರ್ ಹಸುಗಳ ಫ್ಯಾಷನ್ ಶೋ ಕಾರ್ಯಕ್ರಮ ನಡೆಸಲು ನಾವು ಉತ್ಸುಕರಾಗಿದ್ದೇವೆ. ಸ್ಥಳೀಯ ತಳಿಗಳನ್ನು ರಕ್ಷಿಸುವ ಜಾಗೃತಿ ಮೂಡಿಸುವ ಸಲುವಾಗಿ ಈ ಆಯೋಜನೆ ಎಂದಿದ್ದಾರೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಪ್ಪಯ್ಯಣ್ಣ ಹಾಡೋನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಮೂನ್ನೇಗೌಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಪ್ಪ ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಆರಾಧ್ಯ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು