ಮೈಸೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೇವಾಲಯದ ವತಿಯಿಂದ ಕುಂಭಕರ್ಣ ಸ್ವಾಗತ. ಬಿಜೆಪಿ ಜಿಲ್ಲಾಧ್ಯಕ್ಷ ಎಲ್ ನಾಗೇಂದ್ರ ಸೇರಿ ಸ್ಥಳೀಯ ಅಮಿತ್ ಶಾ ಅವರನ್ನು ಸ್ವಾಗತಿಸಿದರು ಕಳಸ ಮಂಗಳವಾದ್ಯದ ಮೂಲಕ ಗೃಹ ಸಚಿವರನ್ನು ಅರ್ಚಕರು ಬರಮಾಡಿಕೊಂಡರು.
ಗೃಹ ಸಚಿವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿ ವೈ ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ, ಸಿಟಿ ರವಿ ಸಾತ್. ಅಮಿತ್ ಶಾ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಸ್ಥಾನದ ಮುಂಭಾಗದ ಬ್ಯಾರಿಕೆಟ್ ಹಾಕಲಾಯಿತು. ಅದಲ್ಲದೆ 2.15 ರಿಂದ ಸಂಜೆ ನಾಲ್ಕರ ತನಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ದೇವಾಲಯದ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ವೇಳೆ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ ಚಾಮುಂಡಿ ಬೆಟ್ಟದಿಂದ ರ್ಯಾಡಿಷನ್ ಬ್ಲೂ ಹೋಟೆಲ್ ಕಡೆಗೆ ತೆರಳಿದರು.