ಕ್ಯಾನ್ಬೆರಾ : 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ವಿಶ್ವ ಕಪ್ ಟ್ರೋಫಿ ತನ್ನದಾಗಿಸಿಕೊಂಡಿತು.
ಭಾರತೀಯರ ಕನಸನ್ನು ಬಗ್ನಗೊಳಿಸಿ ಮೂರನೇ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಟೀಂ ಇಂಡಿಯಾದ ಕನಸು ನುಚ್ಚುನೂರಾಗಿತ್ತು. ಹಾರು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಈ ಮೂಲಕ ಆರು ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡ ಆಸ್ಟ್ರೇಲಿಯಾ ಹೊರ ಹೊಮ್ಮಿತ್ತು.
ಇದೀಗ ಭಾರತಕ್ಕೆ ಸೇಡನ್ನು ತೀರಿಸಿಕೊಳ್ಳುವ ಸದಾ ಅವಕಾಶ ಬಂದೊದಗಿದೆ ಆಶಿಶ್ ತಂಡವನ್ನು ಮಣಿಸಿ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಳ್ಳುವಂತೆ ಶತಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ಕ್ರೀಡಾಂಗಣದಲ್ಲೂ ಟೀಮ್ ಇಂಡಿಯಾ ಅಭಿಮಾನಿಗಳು ಆಸೀಸ್ ಗೆ ತಿರುಗೇಟು ನೀಡುವಂತೆ ಪೋಸ್ಟರ್ ಹಿಡಿದು ಹುರಿದುಂಬಿಸುತ್ತಿದ್ದಾರೆ.
19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯವು ಇಲ್ಲಿನ ಬೆನೋನಿಯಲ್ ಇರುವ ಮಿಲೊಮೂರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಕಾಯ್ದುಕೊಂಡ ಆಸ್ಟ್ರೇಲಿಯಾ ಓವರ್‌ಗಳಲ್ಲಿ ಏಳು ವಿಕೆಟ್ ಗಳ ನಷ್ಟಕ್ಕೆ 253 ರನ್ ಗಳಿಸಿ ಭಾರತಕ್ಕೆ 254 ರನ್ ಗಳ ಗುರಿ ನೀಡಿದೆ.