ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗೌಡರು ಗ್ರಾಮದ ದರ್ಶನ್ ಅಭಿಮಾನಿ ವೀರಭದ್ರ ಕಾಟೇರ ಸಿನಿಮಾ ಸಕ್ಸಸ್ ಆಗಲಿ ಅಂತ ಗುರಗುಂಟ ಅಮರೇಶ್ವರ ದೇವರಿಗೆ ಹರಕೆ ಹೊತ್ತಿದ್ದ ಹರಕೆ ತೀರಿಸಲು ಈಗ ಪಾದಯಾತ್ರೆ ಹೊರಟಿದ್ದಾನೆ.
ದರ್ಶನ್ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಅಮರೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ ನೆರವೇರಿಸಿ ಪಾದಯಾತ್ರೆ ಆರಂಭಿಸಿದ್ದಾನೆ.
ಫೆಬ್ರವರಿ 16ರಂದು ದರ್ಶನ್ ಹುಟ್ಟು ಹಬ್ಬದ ದಿನ ಅವರ ಮನೆಗೆ ತೆರಳಿ ಕೇಕ್ ಕತ್ತರಿಸುವ ಆಸೆ ಇಟ್ಟು ಕೊಂಡಿದ್ದಾನೆ ಮಾರ್ಗದ ಮಧ್ಯದಲ್ಲಿ ದರ್ಶನ್ ಅಭಿಮಾನಿಗಳು ಶುಭ ಕೋರಿ ಪಾದಯಾತ್ರೆ ಯಶಸ್ವಿಯಾಗಿದ್ದಾರೆ.
ನಟನ ನೆಚ್ಚಿನ ಅಭಿಮಾನಿಗಳಲ್ಲಿ ಭಾಗವಹಿಸಲು ಸುಮಾರು 460 ಕಿಲೋಮೀಟರ್ ಪಾದಯಾತ್ರೆ ಹೊರಟಿದ್ದಾನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗುರಗುಂಟದಿಂದ ಬೆಂಗಳೂರಿಗೆ ದರ್ಶನ್ ವೀರಭದ್ರ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.