ನವದೆಹಲಿ : ಕ್ಯಾಪ್ಟನ್ ಸೌರಬ್ ವಸಿಷ್ಠ, ಕಮೆಂಡರ್ ಪೂರ್ಣೀಂದು ತಿವಾರಿ , ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮ, ಕಮಾಂಡರ್ ಸುಗುಣಾಕರ್ ಪಾಕಲಾ, ಕಮಾಂಡರ್ ಸಂಜೀವ್ ಗುಪ್ತ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರು ಕತಾರ್ ನಲ್ಲಿ ಬಂಧನಕ್ಕೊಳಗಾದ ಮಾಜಿ ನೌಕಾಪಡೆಯ ಅಧಿಕಾರಿಗಳಾಗಿದ್ದಾರೆ .
ಎಲ್ಲ ಮಾಜಿ ಅಧಿಕಾರಿಗಳು ಭಾರತೀಯ ನೌಕಾಪಡೆಯಲ್ಲಿ 20 ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ ನೌಕಾಪಡೆಯಲಿದ್ದಾಗ ಅವರ ಅಧಿಕಾರ ಅವಧಿಯು ಯಾವುದೇ ವಿವಾದಗಳಿಲ್ಲದೆ ಕೊನೆಗೊಂಡಿತ್ತು ಮತ್ತು ಅವರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಮಾಜಿ ಅಧಿಕಾರಿಗಳನ್ನು ಆಗಸ್ಟ್ 2022 ರಲ್ಲಿ ಬಂಧಿಸಲಾಗಿತ್ತು ಆದರೆ ಈ ಸುದ್ದಿ ಅಕ್ಟೋಬರ್ 25ರಂದು ಬೆಳಕಿಗೆ ಬಂದಿತ್ತು ಪೂರ್ಣೇಂದು ತಿವಾರಿ ಅವರ ಸಹೋದರಿ ಮಿತು ಭಾರ್ಗವ ಅವರು ಎಕ್ಸ್ ನಲ್ಲಿ ಈ ಕುರಿತು ಮಾಹಿತಿ ಪೋಸ್ಟ್ ಮಾಡಿದ್ದಾರೆ ಮಿತು ಭಾರ್ಗವ ಅವರು ಕತಾರ್ ನ ರಾಜಧಾನಿ ಲೋಹದಲ್ಲಿ 57 ದಿನಗಳ ಕಾಲ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳು ಅಕ್ರಮ ಬಂಧನದಲ್ಲಿದ್ದಾರೆ ಎಂದು ಹೇಳಿದರು.
ಆ ಬಳಿಕ ಕಳೆದ ವರ್ಷ ಮಾರ್ಚ್ 1 ರಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಯಿತು. 25ರಂದು ಚಾರ್ಜ್ ಶೀಟ್ ದಾಖಲಿಸಿ, ಮಾರ್ಚ್ 29 ರಂದು ವಿಚಾರಣೆ ಪ್ರಾರಂಭವಾಯಿತು. ಅಕ್ಟೋಬರ್ 26ರಂದು ನ್ಯಾಯಾಲಯವು ಎಲ್ಲರಿಗೂ ಮರಣದಂಡನೆ ವಿಧಿಸಲಾಯಿತು.
ಫೆಬ್ರವರಿ 12ರಂದು ಬೆಳಗ್ಗೆ ಎಲ್ಲರೂ ಭಾರತಕ್ಕೆ ಮರಳಿದರು ಆದರೆ ಮರಣ ದಂಡನೆಯನ್ನು ಘೋಷಿಸಿದ 108 ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ ಮರಣದಂಡನೆಯ ನಿರ್ಧಾರ ನಂತರ ಭಾರತೀಯ ವಿದೇಶಾಂಗ ಸಚಿವಾಲಯವು ಮರಣದಂಡನೆಯ ನಿರ್ಧಾರದಿಂದ ನಮಗೆ ಆಶ್ಚರ್ಯವಾಗಿದೆ. ನಿರ್ಧಾರದ ವಿವರವಾದ ಪ್ರತಿಗಾಗಿ ನಾವು ಕಾಯುತ್ತಿದ್ದೇವೆ ನಾವು ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ.
ಭಾರತೀಯ ನಾಗರಿಕರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವಯಿಸಲಾಗಿದೆ ಎಂದಿತ್ತು. ಏನ್ ನಿರ್ಧಾರದ ಕೆಲವು ದಿನಗಳ ನಂತರ ಭಾರತವು ನವಂಬರ್ 9ರಂದು ಮೇಲ್ಮನವಿ ಸಲ್ಲಿಸಿತು ನವಂಬರ್ 23 ರಂದು ನ್ಯಾಯಾಲಯವು ಈ ಮನವಿಯನ್ನು ಸ್ವೀಕಾರ ಮಾಡಿತು ಮರಣದಂಡನೆ ತೀರ್ಪಿನ ಒಂದು ತಿಂಗಳೊಳಗೆ ಈ ಮನವಿ ಅಂಗೀಕರಿಸಿರುವುದು ದೊಡ್ಡ ವಿಜಯವಾಗಿದೆ.
ನ್ಯಾಯಾಲಯವು ಇವರಿಗೆ ಮೂರರಿಂದ 25 ವರ್ಷಗಳ ಜೈಲು ಶಿಕ್ಷೆ ವಿಧಿಸುವ ತೀರ್ಮಾನ ಮಾಡಿತು ಇದಲ್ಲದೆ ಈ ಶಿಕ್ಷೆಯು ವಿರುದ್ಧ ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶ ಕೂಡ ಕೊಟ್ಟಿದೆ .
ಪ್ರಧಾನಿ ಮೋದಿ ಅವರ ಸಲಹೆ ಮೇರೆಗೆ ಎನ್ಎಸ್ಎ ದೋವಲ್ ಕಾತರ್ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಮರಣದಂಡನೆ ತೀರ್ಪಿನ ನಂತರ ದೋವಲ್ ಎರಡು ಮೂರು ಬಾರಿ ದೋಹೆಗೆ ಹೋಗಿದ್ದರು.