ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಜಿಲ್ಲಾ ಚೇಂಬರ್ ಸಿಲ್ಕ್ ಡೆವಲಪ್ಮೆಂಟ್ ಸೆಂಟರ್ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಬೇಟೆ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ರೈತಣ್ಣ ಊಟ, ರೈತನ ಕ್ಲಿನಿಕ್ ಮತ್ತು ರೈತನ ಹಾಸಿಗೆಯ ವಿಶೇಷಗಳನ್ನು ತಿಳಿದುಕೊಂಡು ವಾಣಿಜ್ಯೋದ್ಯಮಗಳು ಮತ್ತು ಕೈಗಾರಿಕೋದ್ಯಮಗಳಿಂದ ಕೂಡಿರುವ ಸಂಸ್ಥೆ ಜನಸೇವೆಯಲ್ಲಿ ತೊಡಗಿರುವದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಿಲ್ಕ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್ ಗಳನ್ನು ಪ್ರಾರಂಭಿಸಲು ಅಗತ್ಯ ಸಹಕಾರ ನೀಡುವುದಾಗಿ ಬರವಸೆ ನೀಡಿದರು.
ಸಿಲ್ಕ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಹೊಸದಾಗಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಪ್ರಾರಂಭಿಸಿ ಹೋಟೆಲ್ ಉದ್ಯಮಕ್ಕೆ ಅಗತ್ಯವಿರುವ ಯುವ ಸಿಬ್ಬಂದಿಯನ್ನು ತರಬೇತಿ ನೀಡಿ ಕೌಶಲ್ಯ ಪೂರ್ಣ ಉದ್ಯೋಗಿಗಳನ್ನು ನೀಡುವ ಕುರಿತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧಿಕಾರಿಗಳು ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಸ್ತಾವನೆ ಸಲ್ಲಿಸಿದರು. ಸಿಲ್ಕ್ ಡೆವಲಪ್ಮೆಂಟ್ ಸೆಂಟರ್ ಕಾರ್ಯದಕ್ಷತೆ ವಿವಿಧ ಕೋರ್ಸ್ ಗಳು ಮತ್ತು ಉಚಿತ ತರಬೇತಿ ಪಡೆಯುವವರ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಕೈಗಾರಿಕಾ ಅಧಿಕಾರಿ ನಿರ್ದೇಶಕ ಸೋಮಶೇಖರ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪಿ ಎಸ್ ಹಿಟ್ಟನ್ನು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ ಮಹಾರುದ್ರ ಗೌಡ ಹಿರಿಯ ಉಪಾಧ್ಯಕ್ಷ ಯಶ್ವಂತ್ ರಾಜ್ ನಾಗಿರೆಡ್ಡಿ, ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.