ಚಿತ್ರದುರ್ಗದಲ್ಲಿ ಇಂದು ಪದ್ಮಶಾಲಿ ಬಹುಮತ ಸಮಾಜ ಜಲ ನೇಕಾರರ ಸಮುದಾಯಗಳ ಒಕ್ಕೂಟ ಪದ್ಮಶಾಲಿ ಯುವಕ ಸಂಘ ಪದ್ಮಶಾಲಿ ಮಹಿಳಾ ಸಂಘ ಇವರ
ಸಹಯೋಗದೊಂದಿಗೆ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ಒನಕೆ ಓಬವ್ವ ವೃತ್ತದ ವರೆಗೆ ಭವ್ಯ ಮೆರವಣಿಗೆಯಲ್ಲಿ ನೂರಾರು ಕುಂಭಗಳನ್ನು ಮತ್ತು ಮಹಿಳೆಯರು ಗಾಂಧಿ ವೃತ್ತ , ಎಸ್ ಬಿ ಎಂ ವೃತ, ಮೆರವಣಿಗೆಯನ್ನು ಮಾಡುತ್ತಾ ಬಂದಿದೆ.
ಈ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದೆ ಇದು ನೇಕಾರರ ಪದ್ಮಶಾಲಿ ಜನಾಂಗದ ಕುಲದೇವತೆ ಮಾರ್ಕಂಡೇಶ್ವರ ಜಯಂತಿಯನ್ನು ಇಂದು ಹಮ್ಮಿಕೊಂಡಿದ್ದರು. ಈ ಜಯಂತಿಯಲ್ಲಿ ಡೊಳ್ಳು ,ಕುಣಿತ, ತಮಟೆ ,ವೀರಗಾಸೆ , ಮೆರವಣಿಗೆಯಲ್ಲಿ ನೋಡುಗರ ಜನರಿಗೆ ತುಂಬಾ ಆಕರ್ಷಣಿಯವಾಗಿತ್ತು. ಸಾರೋಟಿನಲ್ಲಿ ಬೃಹತ್ ಭಾವಚಿತ್ರವನ್ನು ಇರಿಸಿ ಮೆರವಣಿಗೆಯ ಉದ್ದಕ್ಕೂ ಅಲ್ಲಲ್ಲಿ ಪಟಾಕಿಯನ್ನು ಒಡೆಸಿ ಕುಣಿದು ಕೊಪ್ಪಳಿಸಿದರು .
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಬುದಾರ್ಪು ತಿಮ್ಮಪ್ಪ, ಉಪಾಧ್ಯಕ್ಷ ಭಾವನಾಮೂರ್ತಿ , ಸೋಮು ಜಿ ಎಸ್ ಚಂದ್ರಶೇಖರಪ್ಪ, ಸಹ ಕಾರ್ಯದರ್ಶಿ ಡಾಕ್ಟರ್ ನಾರಮಂಚಿ ಎನ್ ಜಗನ್ನಾಥ್ ಇನ್ನು ಮುಂತಾದವರು ಮಾರ್ಕಂಡೇಶ್ವರ ಉತ್ಸವದಲ್ಲಿ ಭಾಗವಹಿಸಿದ್ದರು.