ಬಿಹಾರದಲ್ಲಿ ಬಿಜೆಪಿಯು ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ಸದನದಲ್ಲಿ ಇಂದು ವಿಶ್ವಾಸಮತ ಗೆದ್ದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸಿದ್ದಾರೆ. 129 ಶಾಸಕರು ನಿತೇಶ್ ಕುಮಾರ್ ಅವರ ಬೆಂಬಲಿಸಿದ್ದಾರೆ ಒಟ್ಟು 243 ಸದಸ್ಯ ಬಲದ ಬಹುಮತಕ್ಕೆ 122 ಸದಸ್ಯರ ಅಗತ್ಯವಿತ್ತು. ಬಿಜೆಪಿ ಜೆಡಿಎಸ್ ಮೈತ್ರಿಕೂಟ 128 ಸದಸ್ಯರನ್ನು ಹೊಂದಿದೆ ಬಿಜೆಪಿಯ 78 ಶಾಸಕರಿದ್ದು , ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ 45 ಶಾಸಕರನ್ನು ಹೊಂದಿದ್ದು.
ಜಿತಿನ್ ರಾಮ್ ಮಾಂಜಿ ಹಿಂದುಸ್ತಾನ್ ಹವಾಮ್ ಮೋರ್ಚಾ 4 ಸ್ಥಾನವನ್ನು ಹೊಂದಿದ್ದು. ಇನ್ನುಳಿದಂತೆ ಪಕ್ಷೇತರರು ಒಂದು ಎ ಮೈತ್ರಿಕೂಟವನ್ನು ಬೆಂಬಲಿಸಿ ವಿರೋಧ ಕೂಟವಾಗಿ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ 114 ಸ್ಥಾನಗಳನ್ನು ಹೊಂದಿದ್ದವು.
ಬಿಜೆಪಿ ಜೊತೆಗೂಡಿ ನೂತನ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಅವರು ವಿಶ್ವಾಸಮತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಜೆಡಿಎಸ್ ವ್ಯಕ್ತಪಡಿಸಿತು.
ಇಂದು ಬಿಹಾರದಲ್ಲಿ ಎನ್.ಡಿ.ಎ ಸರ್ಕಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಹುಮತ ಪಡೆದಿದ್ದಾರೆ. 9 ಬಾರಿ ಬಿಹಾರ ಮುಖ್ಯಮಂತ್ರಿಯಾದ ಬಳಿಕ ವಿಶ್ವಾಸಮತ ಸಾಬೀತು ಪಡಿಸುವವರೇ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು ಅದಕ್ಕೆ ಈಗ ಉತ್ತರ ದೊರೆತಿದೆ.
ಈ ಪಕ್ಷದ ಮೂರು ಜನ ಶಾಸಕರು ವಿಶ್ವಾಸ ಮತ ಮಂಡಿಸುವ ವೇಳೆಯಲ್ಲಿ ವಿಧಾನಸಭೆಯಿಂದ ದೂರ ಉಳಿದಿದ್ದಾರೆ ಈ ಮೂರು ಜನ ಪಕ್ಷದಿಂದ ಯು ಟರ್ನ್ ತೆಗೆದುಕೊಂಡರೆ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ವಿಜಯಕುಮಾರ್ ಚೌದರಿ ಅವರು ವಿಶ್ವಾಸಮತ ಪರೀಕ್ಷೆಯ ಸಮಯದಲ್ಲಿ ಎಲ್ಲಾ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಹಾಜರಿರುತ್ತಾರೆ ಎಂದು ಹೇಳಿದ್ದರು.