Breaking
Mon. Dec 23rd, 2024

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಇವತ್ತು ಕರ್ನಾಟಕ ರಾಜ್ಯದ ವಿಧಾನ ಮಂಡಲದ ಮೊದಲ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯಪಾಲರ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ಹಿಂದಿಯಲ್ಲಿ ಭಾಷಣ ಮಾಡಿರುವ ಬಗ್ಗೆ ನನ್ನ ವಿರೋಧವಿದೆ.

ಶಾಸನ ಸಭೆಯಲ್ಲಿ ಒಬ್ಬ ಶಾಸಕರು ಎಂ.ಎಲ್.ಸಿ ಮುಖ್ಯಮಂತ್ರಿಗಳು ವಿರೋಧ ಮಾಡಿಲ್ಲ ರಾಜ್ಯಪಾಲರು ಈ ಹಿಂದೆ ಕನ್ನಡ ಅಭಿವೃದ್ಧಿ ಮಾಡುತ್ತೇವೆ ಅಂತ ಮಾತನಾಡಿದರು ನಮ್ಮ ಗೌರವಾನ್ವಿತ ಸದಸ್ಯರನ್ನು ಏನು ಅಂತ ಹೇಳಬೇಕು ನನಗೆ ಗೊತ್ತಿಲ್ಲ.

ನಮ್ಮ ಶಾಸಕರು ಎಂಎಲ್ಸಿ ಮಂತ್ರಿಗಳ ಬಗ್ಗೆ ಖಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ 19 67ರ ಅಂದಿನ ರಾಜ್ಯಪಾಲರು ಇಂಗ್ಲಿಷ್ ಭಾಷಣಕ್ಕೆ ಒಪ್ಪಿರಲಿಲ್ಲ ಜೆ.ಎಚ್ ಪಾಟೀಲ್ ಸಿಎಂ ಆಗಿದ್ದಾಗ ಸಂಪೂರ್ಣ ಭಾಷಣ ವಿರೋಧ ಮಾಡಿದ್ದೆ ‌.

ಖುರ್ಶಿತ್ ಅಲಂ ಖಾನ್ ರಾಜ್ಯಪಾಲರ ಭಾಷಣ ಮಾಡುವುದಕ್ಕೆ ಆಗದೆ ಕನ್ನಡದಲ್ಲಿ ಭಾಷಣ ಮಾಡಬೇಕು ಎಂದು ಹಠ ಹಿಡಿದಾಗ ಸದನದಿಂದ ಹೊರ ಹೋದರು ಇದು ಐತಿಹಾಸಿಕವಾದ ದಿನ.

ಫೆಬ್ರವರಿ 24ರ ಒಳಗೆ ಎಲ್ಲೆಲ್ಲೂ ಕನ್ನಡ ನಾಮಫಲಕ ಹಾಕಬೇಕು ಅಂತಾರೆ ಆದರೆ ಎಲ್ಲಾ ಹಾಕಿಲ್ಲ ಮಾರ್ವಾಡಿಗರು  ತಮಿಳುಗರು ತುಂಬಿ ತುಳುಕುತ್ತಿದ್ದಾರೆ  ಸಂಪೂರ್ಣ ಬದಲಾವಣೆಯಾಗಬೇಕು ಆಗದಿದ್ದರೆ ಸಂಪೂರ್ಣ ಬಂದ್ ಮಾಡುತ್ತೇವೆ ಎಂದು ಸದನದಲ್ಲಿ ಒಪ್ಪಿಗೆ ತಂದು ಜಾರಿ ಮಾಡಬೇಕು ಎಂದು ಹೇಳಿದರು.

Related Post

Leave a Reply

Your email address will not be published. Required fields are marked *